ಸಾಲಮನ್ನಾ ಆದೇಶ ಇಂದೇ ಜಾರಿಮಾಡುತ್ತೇನೆ !

Kannada News

24-06-2017

ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ. ಸದ್ಯದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನ ಎಂದರು. ಇನ್ನು ರಾಜ್ಯದ ರೈತರ ಸಾಲಮನ್ನ ವಿಚಾರ ಮಾತನಾಡಿದ ಅವರು. ಇಂದು ಸಾಲಮನ್ನದ ಸಂಬಂಧ ಆದೇಶ ಹೊರಡಿಸುತ್ತೇನೆ, ಜೂನ್ 20 ರವರೆಗಿನ ಬಾಕಿ ಉಳಿದಿರುವ ಎಲ್ಲ ರೈತರಿಗೂ ಇದು ಅನ್ವಯವಾಗಲಿದ್ದು. ಇಂದೇ ಆದೇಶ ಜಾರಿ ಮಾಡುತ್ತೇನೆ ಎಂದಿದ್ದಾರೆ. ಜೂನ್ ಅಂತ್ಯ ಸಮೀಪಿಸಿದರೂ ಮಳೆ ಆಗದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದು, ಮಳೆ ಬರುವ ನಿರೀಕ್ಷೆಯಿದ್ದರೂ, ಮೋಡ ಬಿತ್ತನೆ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಸಿದ್ದರಾಮಯ್ಯ ಇಲ್ಲಿ ತಿಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ