ಮೂವರನ್ನು ಜೀವಂತ ಹೂತಿಟ್ಟ ದುಷ್ಟರು !

Kannada News

24-06-2017

ಉತ್ತರ ಪ್ರದೇಶ: ಅಕ್ರಮ ಮರಳು ದಂಧೆಯನ್ನು ವಿರೋಧಿಸಿದ್ದಕ್ಕಾಗಿ ಇಬ್ಬರು ಮಕ್ಕಳು ಸೇರಿದಂತೆ ಒಬ್ಬ ದಲಿತರನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತಿಟ್ಟಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಶಾಸಕರೊಬ್ಬರ ಮಗ ಮತ್ತು ಮರಳು ದಂಧೆಗೆ ಸಹಾಯಕನಾಗಿದ್ದ ಕಾಂಟ್ರಾಕ್ಟರ್  ಈ ದುಷ್ಕೃತ್ಯ ಎಸಗಿದ್ದಾರೆ. ಉತ್ತರ ಪ್ರದೇಶದ ಬಹರೈಚ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯನ್ನು ಅಲ್ಲಿನ ಸ್ಥಳೀಯರು ವಿರೋಧಿಸಿದ್ದಕ್ಕಾಗಿ ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಬಿಜೆಪಿ ಶಾಸಕರಾದ ಸುಭಾಷ್ ತ್ರಿಪಾಠಿ ಅವರ ಮಗನ ಬಗ್ಗೆ, ಈ  ಆರೋಪ ಹೊರಿಸಿರುವನ್ನು ನಿರಾಕರಿಸಿದ್ದಾರೆ, ಮತ್ತು ಇದೊಂದು ವ್ಯವಸ್ಥಿತ ಪಿತೂರಿ ಎಂದಿದ್ದಾರೆ. ಆದರೆ ಜಿಲ್ಲಾಡಳಿತ ಈ ಕುರಿತು ಮೂವರ ಸಮಿತಿಯೊಂದನ್ನು ನೇಮಿಸಿ ಶಿಘ್ರ ದಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದೆ. ಮೃತ ಮಕ್ಕಳು ದೇಹಗಳು ಮರಳು ದಂಧೆ ನಡೆಸುತ್ತಿರುವ ಪಕ್ಕದ ಕಾಲುವೆಯಲ್ಲಿ ಸಿಕ್ಕೆವೆ ಎಂದು ಹೇಳಲಾಗಿತ್ತಿದೆ. ಘಟನೆಯಲ್ಲಿ ಮೃತಪಟ್ಟಿರುವ ಕಿರಣ್ ಎಂಬುವರ ತಂದೆ ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ನಮಗೆ ಮೀಸಲಾದ ಪ್ರದೇಶದಲ್ಲಿ ಇವರು ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ. ಇದನ್ನು ವಿರೋಧಿಸಿದ್ದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದು, ಶಾಸಕನ ಮಗ ಮತ್ತು ಕಾಂಟ್ರಾಕ್ಟರ್ ಮೇಲೆ  ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯಿದೆ ಮೇಲೆ ಕೇಸು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ. ಇಲ್ಲಿನ ಸ್ಥಳೀಯ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆದರೆ ಇಂತಹ ದುಷ್ಕೃತ್ಯಗಳು ಆಗಾಗ ನಡೆಯುತ್ತಿದ್ದು ಬಲಾಡ್ಯರಿಂದ ಬಡವರ, ದಲಿತರ ರಕ್ಷಣೆ ಅಸಾಧ್ಯವಾಗಿದೆ.     ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ