ಅಮಾವಾಸ್ಯೆ ಪೂಜೆ ಮಾಡಲಿದ್ದಾರೆ ಎಚ್.ಡಿ.ಕೆ !

Kannada News

24-06-2017

ಮಂಡ್ಯ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅಮಾವಾಸ್ಯೆ ಪೂಜೆ ನಡೆಸಲಿದ್ದಾರೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯ ಕಾಲ ಭೈರವ ನ ಸನ್ನಿಧಿಯಲ್ಲಿ ಈ ಪೂಜೆ ಮಾಡಲಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಈ ಪೂಜೆ ನಡೆಯಲಿದ್ದೂ, ಇದು ಸತತ ೩ ನೇಯ ಅಮಾವಾಸ್ಯೆ ಪೂಜೆಯಾಗಿದೆ. ಅಮಾವಾಸ್ಯೆಯಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿ ಪ್ರತೀತಿ ಹಿನ್ನಲೆಯಲ್ಲಿ ಈ ಪೂಜೆಯನ್ನು ಕೈಗೊಂಡಿದ್ದಾರೆ. ಶುಕ್ರವಾರ ರಾತ್ರಿಯೇ ಎಚ್ ಡಿ ಕೆ ದಂಪತಿ ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸಲಹೆಯಂತೆ ಈ ಪೂಜೆ ಸಲ್ಲಿಕೆಯಾಗುತ್ತಿದ್ದು. ದೇವೇಗೌಡರಿಂದಲೂ ಈ ಹಿಂದೆ ಅಮಾವಾಸ್ಯೆಯ ಪೂಜೆ ಸಲ್ಲಿಸಿಕೆಯಾಗಿತ್ತು ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ