ಟ್ರಂಪ್ ನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ !

Kannada News

24-06-2017

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ದೇಶಗಳ ಪ್ರವಾವನ್ನು ಕೈಗೊಂಡಿದ್ದಾರೆ. ಪ್ರವಾಸದಲ್ಲಿ ಪೋರ್ಚುಗಲ್, ಅಮೇರಿಕಾ ಮತ್ತು ನೆದರ್ ಲ್ಯಾಂಡ್ಸ್, ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಅಂತರಾಷ್ಟ್ರೀಯವಾಗಿ ಭಾರತದ ಸಂಬಂಧಗಳನ್ನು ಇತರ ದೇಶಗಳೊಂದಿಗೆ ಬಲಪಡಿಸಲು ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸವು ಅತ್ಯಂತ ಪ್ರಾಮುಖ್ಯತೆ ಪಡೆದಿದೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೇರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಟ್ರಂಪ್ ಅವರು ಮೋದಿ ಅವರಿಗೆ ಆತಿಥ್ಯ ವಹಿಸಲಿದ್ದು, ಅಮೇರಿಕದ ಶ್ವೇತ ಭವನದಲ್ಲಿ ಭೋಜನಾ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್ 26 ರಂದು ಪ್ರಧಾನಿ ಮೋದಿ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಿಂದ ಭಾರತ ಮತ್ತು-ಅಮೇರಿಕದ ನಡುವಿನ ಸಂಬಂಧಗಳು ಮತ್ತಷ್ಟು ವೃದ್ಧಿಗೊಳ್ಳಲಿವೆ ಎಂದು ಮೋದಿ ಹೇಳಿದ್ದಾರೆ. ಅಮೇರಿಕದಲ್ಲಿ ಪ್ರಧಾನಿ ಮೋದಿಯವರು ಅಮೇರಿಕದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಪ್ರಮುಖವಾಗಿ, ಅಮೇರಿಕದ ಉಪಾಧ್ಯಕ್ಷರಾದ ಮೈಕ್ ಪೆನ್ಸ್, ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಹೆಚ್.ಆರ್ ಮಾಕ್.ಮಾಸ್ಟರ್ ಮತ್ತು ಇತರ ಪ್ರಮುಖರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಅಮೇರಿಕದ ಪ್ರಮುಖ ಕಂಪನಿಗಳ ಸಿಇಒ ಗಳ ಜೊತೆಗೂ ಚರ್ಚೆ ನಡೆಸಲಿದ್ದಾರೆ.         ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ