ಲಾರಿ ಪಲ್ಟಿ ಒರ್ವ ಸಾವು !

Kannada News

24-06-2017

ಮಂಡ್ಯ: ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿ ಒರ್ವ ಸಾವನ್ನಪ್ಪಿದ್ದು, ಏಳು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಖರಡ್ಯ ಬಳಿ ಈ ಘಟನೆ ಸಂಭವಿಸದೆ. ರಾಜೇಶ್(೩೫) ಮೃತ ದುರ್ದೈವಿ. ಧರ್ಮವೀರ, ಮಧು, ಊರೀನ್, ರಾಜ್ ಕುಮಾರ್ ಸೇರಿದಂತೆ ಏಳು ಜನರಿಗೆ ಗಾಯಗಳಾಗಿವೆ. ಮೈಸೂರು ಕಡೆಯಿಂದ ಬೀದರ್ ಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಜಮೀನಿನೊಳಗೆ ಲಾರಿ ಪಲ್ಟಿಯಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ