ಹಾಡ ಹಗಲೇ ದರೋಡೆ !

Kannada News

23-06-2017

ಮೈಸೂರು: ಮೈಸೂರಿನ ಗೋಕುಲಂನಲ್ಲಿ ಹಾಡ ಹಗಲೇ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ. ಇದರಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸುಮಾರು ೩೦ ಲಕ್ಷ ರೂಪಾಯಿ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗೋಕುಲಂ ೩ ನೇ ಹಂತದ ೯ ನೇ ಮುಖ್ಯರಸ್ತೆಯಲ್ಲಿರುವ ಖ್ಯಾತಿ ಸ್ಟೀಲ್ಸ್ ಮಾರ್ಕೆಟಿಂಗ್ ಕಂಪನಿಯಲ್ಲಿ ಘಟನೆ ನಡೆದಿದೆ. ೮ ರಿಂದ ೯ ಮಂದಿಯಿದ್ದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದೆ. ಕಚೇರಿಯಲ್ಲಿದ್ದ ಇಬ್ಬರು ನೌಕರರಿಗೆ ಹಲ್ಲೆ ನಡೆಸಿ ಹಣವನ್ನು ದೋಚಿದ್ದಾರೆ ಮತ್ತು ಸಿ.ಸಿ.ಕ್ಯಾಮರಾದ ಹಾರ್ಡ್ ಡಿಸ್ಕ್ ನ್ನೂ ಹೊತ್ತೊಯ್ದಿದ್ದಾರೆ. ವಿಷಯ ತಿಳಿದ ವಿ.ವಿ.ಪುರಂ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದರೋಡೆಕೋರರ ಸೆರೆಗೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ