ಬ್ರಾಂಡೆಡ್ ಹೆಸರಿನ ನಕಲಿ ವಾಚ್ ಜಾಲ ಬಲೆಗೆ !

Kannada News

23-06-2017

ಬೆಂಗಳೂರು: ಪ್ರತಿಷ್ಟಿತ ರಾಡೊ, ಪೊಲೀಸ್ ಕಂಪನಿಗಳ ನಕಲಿ ವಾಚ್‍ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 3 ಲಕ್ಷ ಮೌಲ್ಯದ ನಕಲಿ ವಾಚ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಯಶವಂತಪುರದ ಸುಬೇದಾರ್ ಪಾಳ್ಯದ ಇಸ್ಮಾಯಿಲ್ (25) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 3 ಲಕ್ಷ ಮೌಲ್ಯದ ರಾಡೊ ಹಾಗೂ ಪೊಲೀಸ್ ಕಂಪನಿಯ ನಕಲಿ ವಾಚ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಪ್ಪಾರ ಪೇಟೆಯ ನ್ಯಾಷನಲ್ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಆರೋಪಿಯು ನಕಲಿ ವಾಚ್‍ಗಳ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ