ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ !

Kannada News

23-06-2017

ಬೆಂಗಳೂರು: ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 7 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ನಾಲ್ವರು ಕೋಲ್ಕತ್ತಾ ಮೂಲದ ಯುವತಿಯರನ್ನು ರಕ್ಷಿಸಿದ್ದಾರೆ. ಕಡೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯ ಮಂಜುನಾಥ ಪಾಂಡವಪುರದ ರಾಕೇಶ, ರಾಜೇಶ, ಪ್ರತಾಪ್, ಕೆ. ಆರ್ ಪೇಟೆಯ ಮಧು, ಶ್ರೀರಂಗಪಟ್ಟಣದ ಅನಿಲ್ ಹಾಗೂ ದಕ್ಷಿಣ ಕನ್ನಡದ ಉಜಿರೆಯ ನಿಖಿಲ್ ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 62 ಸಾವಿರ ನಗದು, 6 ಮೊಬೈಲ್ಗಳು, ಸ್ವೈಪಿಂಗ್ ಮೆಷಿನ್ ವಶಪಡಿಸಿಕೊಳ್ಳಲಾಗಿದ್ದು, ಮೂವರು ಕೊಲ್ಕತ್ತಾ ಮೂಲದ ಯುವತಿಯರನ್ನು ರಕ್ಷಿಸಲಾಗಿದೆ. ಆರೋಪಿಗಳು ಬಾಣಸವಾಡಿ ಹೊರಮಾವು ಮುಖ್ಯರಸ್ತೆಯ ಫುಡ್ ಬೋರ್ಡ್ ಜಂಕ್ಷನ್ ಬಳಿ ಟೆಚ್ ಸ್ಪಾ ಅಂಡ್ ಸಲೂನ್ ಹೆಸರಿನ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ