ಆತಂಕ ಸೃಷ್ಠಿಸಿದ ವಿಲ್ಹೀಂಗ್ !

Kannada News

23-06-2017

ಬೆಂಗಳೂರು: ರಂಜಾನ್ ಉಪವಾಸ ಆಚರಣೆಯ 27ನೇ ದಿನದ  ಶಬ್ ಇ ಖದರ್(ಪವಿತ್ರರಾತ್ರಿ) ಖುಷಿಯಲ್ಲಿ ಗುರುವಾರ ರಾತ್ರಿ ವಿಲ್ಹೀಂಗ್ ಜಾಲಿ ರೈಡ್ ನಡೆಸುತ್ತಿದ್ದ  70 ಮಂದಿ ಯುವಕರ ವಿರುದ್ದ ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಂಜಾನ್ ಆಚರಣೆಯ ಖುಷಿಯಲ್ಲಿ ವಿಲ್ಹೀಂಗ್ ಜಾಲಿ ರೈಡ್ ನಡೆಸುತ್ತಿದ್ದವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ 150 ಕ್ಕೂ ಹೆಚ್ಚು ಬೈಕ್‍ ಗಳಲ್ಲಿ ಜಾಲಿ ರೈಡ್ ಹೋಗುತ್ತಿದ್ದ ಯುವಕರ ಮೇಲೆ ಪ್ರಕರಣ ದಾಖಲಿಸಿ 70 ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಲೆಕ್ಕಿಸದೇ ಹೆದ್ದಾರಿಯಲ್ಲಿ ಕರ್ಕಶ ಶಬ್ಧ ಮಾಡಿಕೊಂಡು, ವಿಲ್ಹೀಂಗ್ ಮಾಡುವ ಮೂಲಕ ಆತಂಕ ಸೃಷ್ಠಿಸಿ ನಗರದ ವಿವಿಧ ಬಡಾವಣೆಗಳ ಯುವಕರು ಪೀಣ್ಯ, ಚಿಕ್ಕಬಿದರಕಲ್ಲು, ಮಾದವಾರ, ನೆಲಮಂಗಲ, ಡಾಬಸ್‍ಪೇಟೆ ಭಾಗದಲ್ಲಿ ಮುಂಜಾನೆ ವರೆಗೂ ವಿಲ್ಹೀಂಗ್ ಮಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಗೊರಗುಂಟೆಪಾಳ್ಯದಿಂದ ಆರಂಭವಾಗುವ ನೆಲಮಂಗಲ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಭಂದಿಸಿ ರಸ್ತೆಯುದ್ದಕ್ಕೂ ಪೊಲೀಸ್ ನಿಲ್ಲಿಸಿದ್ದರು. ಇದ್ಯಾವುದನ್ನೂ ಲೆಕ್ಕಿಸದೇ ಕೆಳರಸ್ತೆಯಲ್ಲೇ ಯರ್ರಾಬಿರಿ ಸಾಗುತ್ತಿದ್ದಾಗ ತುಮಕೂರು ರಸ್ತೆಯ ಪಾರ್ಲೆ ಫ್ಯಾಕ್ಟರಿ ಬಳಿ ಕಾದು ಕುಳಿತು ಪೊಲೀಸರು ಬೈಕ್‍ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅರ್ಧದಷ್ಟು ಬೈಕ್ ಸವಾರರು ಹಿಂದಕ್ಕೆ ಚಲಿಸಿದರೆ ಇನ್ನೂ ಕೆಲವರು ಮಂದಿ ರಸ್ತೆ ವಿಭಜಕದ ಮೇಲೆ ಬೈಕ್ ಹತ್ತಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ