ಮಮತಾ ಬ್ಯಾನರ್ಜಿಗಿಂತಲೂ ನಮಗೆ ಹೆಚ್ಚಿನ ಧೈರ್ಯವಿದೆ !

Kannada News

23-06-2017

ಡಾರ್ಜೆಲಿಂಗ್: ಪ್ರತ್ಯೇಕ  ಗೋರ್ಖಲ್ಯಾಂಡ್ ಗೆ  ಆಗ್ರಹಿಸಿ ನಡೆಸುತ್ತಿರುವ ಹೋರಾಟ ದಿನೆ ದಿನೆ ತೀವ್ರವಾಗುತ್ತಿದೆ. ಇದರಿಂದ ಜಿಲ್ಲೆಯಾದ್ಯಂತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಕಳೆದ ಐದು ದಿನಗಳಿಂದ ಗೋರ್ಖಾಲ್ಯಾಂಡ್ ನ ಹೋರಾಟಗಾರರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಘರ್ಷಣೆಗಳು ಉಂಟಾಗಿದ್ದು, ಮೂವರು ಸಾವನ್ನಪ್ಪಿರುವ ಘಟನೆ ಕೂಡ ನಡೆದಿದೆ. ಇದರಿಂದ ಇಲ್ಲಿನ ಜನರು ಮಮತಾ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗುತ್ತಿದ್ದಾರೆ. ಇದು ಭದ್ರತಾ ಪಡೆ ಮತ್ತು ಅಲ್ಲಿನ ಜನರ ನಡುವೆ ಹೋರಾಟದ ಕಿಚ್ಚನ್ನು ಹೆಚ್ಚಿಸುವಂತೆ ಮಾಡುತ್ತಿದೆ. ಬಂಗಾಳಿ ಭಾಷೆಯನ್ನು ಪಶ್ಚಿಮ ಬಂಗಾಳದಲ್ಲಿ ಕಡ್ಡಾಯ ಮಾಡಿ ಹೊರಡಿಸಿದ ಆದೇಶವೇ  ಬ್ಯಾನರ್ಜಿ ಅವರ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಅಲ್ಲಿಯವರರೆಗೂ  ಅಲ್ಲಲ್ಲಿ ಕೆಲವೊಂದು ಭಾಗಗಳಲ್ಲಿ ಮಾತ್ರ ಪ್ರತ್ಯೇಕತೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದ್ದವೇ ಹೊರತು, ಈ ರೀತಿ ಪ್ರತಿಭಟನೆ ಭುಗಿಲೆದ್ದಿರಲಿಲ್ಲ. ಗೋರ್ಖಾ ಜನಮುಕ್ತಿ ಮೋರ್ಚಾ ಹೋರಾಟಗಾರರು ಮುನ್ನೆಲೆಗೆ ಬಂದಿದ್ದು, ಪ್ರತ್ಯೇಕ ರಾಜ್ಯ ಉಂಟಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದು, ಮುಂಬರುವ ದಿನಗಳಲ್ಲಿ ಹೋರಾಟದ ಕಾವು ಇನ್ನೂ ತೀವ್ರವಾಗುವ ಮುನ್ಸೂಚನೆಗಳು ನೀಡುತ್ತಿವೆ. ಕಳೆದ ದಿನ ಘರ್ಷಣೆಯಲ್ಲಿ ಮೃತ ಪಟ್ಟ ಯುವಕನ ತಾಯಿ, ಮಮತಾ ಅವರ ವಿರುದ್ಧ ಮಮತಾ ಬ್ಯಾನರ್ಜಿ ಅವರಿಗಿಂತಲೂ ನಾವು ಶಕ್ತರಾಗಿದ್ದೇವೆ. ಇದಕ್ಕೆಲ್ಲ ನಾವು ಅಂಜುವುದಿಲ್ಲ ಎಂದು ಹೋರಾಟದ ಕಿಚ್ಚಿನಿದಿಂದ ಹೇಳಿದ್ದಾರೆ.    ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ