ವೆಂಕಯ್ಯ ನಾಯ್ಡು ರೈತರಿಗೆ ಅವಮಾನ ಮಾಡಿದ್ದಾರೆ !

Kannada News

23-06-2017

ಮಂಡ್ಯ: ದೇಶದ ರೈತರಿಗೆ ವೆಂಕಯ್ಯ ನಾಯ್ಡು ಅವಮಾನ ಮಾಡಿದ್ದಾರೆ ಎಂದು ಮಂಡ್ಯದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ. ರೈತರ ಸಾಲ ಮನ್ನಾ ಮಾಡೋದು ಫ್ಯಾಷನ್ ಆದರೆ ರೈತರ ಆತ್ಮಹತ್ಯೆ ಫ್ಯಾಷನ್ ಆಗಿದ್ಯ ಎಂದು ವೆಂಕಯ್ಯ ನಾಯ್ಡು ಅವರನ್ನು ಪ್ರಶ್ನಿಸಿದ್ದಾರೆ. ಸಾಲ ಮನ್ನಾ ವಿಚಾರವಾಗಿ ವೆಂಕಯ್ಯ ನಾಯ್ಡು ನೀಡಿರುವ ಹೇಳಿಕೆಗೆ ಕೆ.ಎಸ್.ಪುಟ್ಟಣ್ಣಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವೆಂಕಯ್ಯ ನಾಯ್ಡುಗೆ ರೈತರ ಬಗ್ಗೆ ಗೌರವ ಇದ್ದರೇ ಈ ಕೂಡಲೇ ದೇಶದ ರೈತರನ್ನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದರೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿಸಬೇಕು ಎಂದು ಆಗ್ರಹಿಸಿದರು. ಮುಂದಿನ ತಿಂಗಳು ೩ ರಂದು ರಾಜ್ಯಾದ್ಯಂತ  ಎಲ್ಲಾ ಡಿ.ಸಿ ಕಚೇರಿ ಮುಂಭಾಗ ಹೋರಾಟ ಮಾಡಲಿದ್ದೇವೆ, ರೈತರ ಸಾಲ ಮನ್ನಾ ಹಾಗೂ ಹೊಸದಾಗಿ ಬೆಳೆಗೆ ಸಾಲ ನೀಡುವಂತೆ ಧರಣಿಯಲ್ಲಿ ಒತ್ತಾಯಿಸಲಿದ್ದೇವೆ ಎಂದರು. ರೈತರ ಸಾಲ ಮನ್ನಾ ವಿಚಾರವಾಗಿ ಎಲ್ಲಾ ಪಕ್ಷಗಳಲ್ಲಿ ರಾಜಕೀಯ ಇದ್ದೆ ಇದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರೂ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳುತ್ತಾರೆ, ಅದರಲ್ಲೂ ರಾಜಕೀಯ ಇದೆ. ಸಾಲ ಮನ್ನಾ ಆಗಿರೋದು ಯಾವುದೇ ರಾಜಕೀಯ ಪಕ್ಷಗಳ ಹೋರಾಟದ ಫಲವಲ್ಲ, ಇದು ರೈತರ ಹೋರಾಟದ ಫಲ ಎಂದು ತೀಕ್ಷ್ಣವಾಗಿ ನುಡಿದ್ದಾರೆ. ರಾಜ್ಯದಿಂದಾದ ಸಾಲ ಮನ್ನಾ ಶೇ.೨೦ರಷ್ಟು ರೈತರಿಗೆ ಮಾತ್ರ ಉಪಯೋಗವಾಗಿದೆ. ಕೇಂದ್ರಿಕೃತ ಬ್ಯಾಂಕುಗಳ ಸಾಲ ಮನ್ನಾಕ್ಕಾಗಿ ಒತ್ತಾಯ ಮಾಡುತ್ತೆವೆ. ಸಿಎಂ ಸಿದ್ದರಾಮಯ್ಯ ನವರು ಶೇ.೬೦ ರಷ್ಟು ಸಾಲ ಮನ್ನಾ ಮಾಡಿರೋದು ಸಮಾಧಾನ ತಂದಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ