ನನಗೂ ಡೈರಿಗೂ ಯಾವುದೇ ಸಂಬಂಧವಿಲ್ಲ !

Kannada News

23-06-2017 225

ಬೆಂಗಳೂರು : ಆದಾಯ ತೆರಿಗೆ ಇಲಾಖೆಗೆ ಸಿಕ್ಕಿದೆ ಎನ್ನಲಾಗುತ್ತಿರುವ ಡೈರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಸ್ಪಷ್ಟಪಡಿಸಿದ್ದಾರೆ. ಡೈರಿಯ ಸಂಕೇತಾಕ್ಷರ ಕಾಂಗ್ರೆಸ್ ನಾಯಕರದ್ದು ಎಂದು ತಾವು ಆದಾಯ ತೆರಿಗೆ ಇಲಾಖೆಗೆ ಹೇಳಿರುವುದಾಗಿ ಕೆಲ ಮಾಧ್ಯಮಗಳು ಮಾಡಿರುವ ವರದಿ ಸಂಪೂರ್ಣ ನಿರಾಧಾರ ಎಂದು ಅವರು ತಿಳಿಸಿದ್ದಾರೆ. ಡೈರಿ ನನ್ನದಲ್ಲ. ಅದರಲ್ಲಿ ಇದೆ ಎನ್ನಲಾಗುತ್ತಿರುವ ಬರವಣಿಗೆಯೂ ತಮ್ಮದಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹೀಗಿರುವಾಗ ಸಂಕೇತಾಕ್ಷರ ಕಾಂಗ್ರೆಸ್ ನಾಯಕರದ್ದು ಎಂದು ಹೇಳಿಕೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಬರವಣಿಗೆಯ ಸತ್ಯಾಸತ್ಯತೆ ತಿಳಿಯಬೇಕಾದರೆ ಅದನ್ನು ವಿಧಿವಿಜ್ಞಾನ ಪ್ರಯೋಗಕ್ಕೆ ಕಳುಹಿಸಿ ಎಂದು ನಾನೇ ಹೇಳಿದ್ದೇನೆ ಎಂದಿದ್ದಾರೆ. ನನ್ನ ವಕೀಲರು ಬರವಣಿಗೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆದಿದ್ದಾರೆ. ಬರವಣಿಗೆ ನನ್ನದಲ್ಲ ಎಂದು ಪರೀಕ್ಷೆಯಲ್ಲಿ ಸಾಬೀತಾಗಿದೆ. ಈ ಸಂಬಂಧ ತಜ್ಞರೂ ವರದಿ ನೀಡಿದ್ದಾರೆ. ಬರವಣಿಗೆ ನನ್ನದಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ.




ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ