ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ !

Kannada News

23-06-2017

ಉಡುಪಿ: ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಕ್ರೆಯಲ್ಲಿನ ದಲಿತಕೇರಿ ಮಾಣಿಗುಡ್ಡೆ ಶೋಭಾ ಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ಇವರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕುಮಾರ್ ಬಂಗಾರಪ್ಪ ಸಾಥ್ ನೀಡಿದರು, ಇಲ್ಲಿ ಉಪಹಾರ ಸೇವಿಸಿದ ನಂತರ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ನಾನು ಮಾತನಾಡಬಾರದು ಅಂತ ಹೈಕೋರ್ಟ್ ನಿಂದ ಸ್ಟೇ ತಗೊಂಡಿದ್ದಾರೆ ಸತ್ಯ ಸತ್ಯನೇ, ಸತ್ಯ ಹೊರಗೆ ಬರುತ್ತದೆ. ಸದ್ಯ ಈ ಬಗ್ಗೆ ಹೆಚ್ಚು ಮಾತನಾಡಲ್ಲ, ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಲೂಟಿ ಮಾಡಿ ಹಗಲು ದರೋಡೆ ನಡೆಯುತ್ತಿದೆ, ಎರಡು ವರ್ಷದ ಹಿಂದೆಯೇ ಸಾಲಮನ್ನಾ ಮಾಡಬೇಕಿತ್ತು, ಒಂದರಿಂದ ಎರಡು ಲಕ್ಷ ಸಾಲಮನ್ನಾ ಮಾಡಬೇಕಿತ್ತು ಸಾಲಮನ್ನಾದಿಂದ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಲಾಭವಾಗಲ್ಲ, ಕರ್ನಾಟಕ ರಾಜ್ಯದ ಜನ ಮೂರ್ಖರಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಭ್ರಷ್ಟಾಚಾರದಲ್ಲಿ , ಕಾನೂನು ಸುವ್ಯವಸ್ಥೆ ಹದಗೆಟ್ಟಲ್ಲಿ ರಾಜ್ಯ ನಂಬರ್ ವನ್ ಎಂದು ಕುಟುಕಿದ್ದಾರೆ.  ಸೇಡು ತೀರಿಸಲು ಎಸಿಬಿಯನ್ನು ರಚನೆ ಮಾಡಲಾಗಿದೆ ಎಂದರು. ಮತ್ತು  ಈ ಕುರಿತು ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಸಿದ್ದರಾಮಯ್ಯ ನವರೇ ಈಗೇನು ಹೇಳುತ್ತೀರಿ, ಯುಡಿಯೂರಪ್ಪನವರು ಆರೋಪ ಮಾಡಿದಾಗ ತಳ್ಳಿಹಾಕುತ್ತಾ ಬಂದಿರಿ. ಈಗ ನೀವು ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ತಕ್ಷಣ ರಾಜೀನಾಮೆ ನೀಡಿ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂಬುದು ಈ ಡೈರಿಯ ಮೂಲಕ ಸಾಬೀತಾಗಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ