ಸಿಎಂ ತವರಲ್ಲಿ ರೈತರ ಸಂಭ್ರಮ !

Kannada News

23-06-2017

ಮೈಸೂರು: ರೈತರ ಸಾಲಮನ್ನಾ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವು ಸ್ವಾಗತಿಸಿ , ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರಿನಲ್ಲಿಂದು ಎತ್ತಿನಗಾಡಿಗಳ ಮೇಲೆ ಅವರ ಭಾವಚಿತ್ರವಿರಿಸಿ ರೈತರು ಮೆರವಣಿಗೆ ನಡೆಸಿದ್ದಾರೆ. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ತಮಟೆ ನಗಾರಿಯ ಸದ್ದಿಗೆ  ರೈತರು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಮತ್ತು ಸಿದ್ದರಾಮಯ್ಯ ಪರ ಜಯಘೋಷ ಕೂಗುತ್ತಾ ಎತ್ತಿನಗಾಡಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದರು.   ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ