ಬೇಸತ್ತ ಜನರಿಂದ ಬೀದರ್ ಬಂದ್ !

Kannada News

23-06-2017

ಬೀದರ್: ಹದಗೆಟ್ಟಿರುವ ರಸ್ತೆಗಳಿಂದ ಬೇಸತ್ತಿರುವ ಬೀದರ್ ಜನರು, ಬಂದ್ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ತೀರಾ ಸಂಚರಿಸಲು ಆಗದಂತ ರಸ್ತೆಗಳ ಕುರಿತು ಸಾಕಷ್ಟು ಬಾರಿ ದೂರು,ಮನವಿ ನೀಡಿದರೂ ಜಿಲ್ಲಾಡಳಿತ ಇತ್ತ ಗಮನ ಹರಿಸದೇ ಇರುವುದು, ಬೀದರ್ ಜನರನ್ನು ಕೆರಳಿಸಿದ್ದು. ಇದೀಗ ರಸ್ತೆ ದುರಸ್ತಿಗೆ ಶಿಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಬೀದರ್ ಬಂದ್ ಗೆ ಕರೆ ನೀಡಿಲಾಗಿದ್ದು, ಈ  ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಬಸ್ ಸಂಚಾರ,ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಬಂದ್ ಗೆ ಸಾವ೯ಜನಿಕರು ಸಹ ಬೆಂಬಲ ನೀಡಿದ್ದು, ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ನಗರದಲ್ಲಿ ಸಂಚಾರ ಮಾಡಿದ ಎಸ್.ಪಿ ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ. ಆದರೆ ಬಂದ್ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ  ನೀಡಲಾಗಿಲ್ಲ. ೧೩ ಗಂಟೆಗೆ ರಸ್ತೆ ದುರಸ್ತಿಯ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

ಬೀದರ್ ಬೇಸತ್ತ ಬೀದರ್ ಬಂದ್ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ