ಲಾಂಗು ಮಚ್ಚುಗಳಿಂದ ಕೊಚ್ಚಿ, ರೌಡಿ ಕೊಲೆ !

Kannada News

23-06-2017

ಬೆಂಗಳೂರು: ಬೆಳ್ಳಂ ಬೆಳಿಗ್ಗೆ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ರೌಡಿ ಶೀಟರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಲೇಔಟ್ ಪಳನಿ  ಹತ್ಯೆಯಾದ ರೌಡಿ ಶೀಟರ್. ಲೇಔಟ್ ಪಳನಿ ಕೆ ಜಿ ಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್. ಇಂದು ಮುಂಜಾನೆ ಪಳನಿ ಮನೆಯ ಬಳಿಯೇ ಹತ್ಯೆ ನಡೆದಿದೆ. ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆಯು ಸಹ ಪಳನಿ ಮೇಲೆ ಅಟ್ಯಾಕ್ ಅಗಿತ್ತು. ಹಳೆ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ೨೦ ವರ್ಷಗಳಿಂದ ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್, ಲೇಔಟ್ ಪಳನಿ ಹೆಸರು ದಾಖಲಾಗಿದ್ದು, ಈತನ ಮೇಲೆ ಅನೇಕ ಪ್ರಕರಣಗಳಿವೆ. ರೌಡಿ ಪಳನಿ ಮೃತ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಬೈಕ್ ನಲ್ಲಿ ಬಂದಿದ್ದ ನಾಲ್ಕು ಜನರ ಗ್ಯಾಂಗ್ ಮನೆಯ ಮುಂದೆ ಇದ್ದ ಅಫೀಸಿನಲ್ಲಿ ಪಳನಿ ಸ್ಥಳಕ್ಕೆ ಬಂದ ತಕ್ಷಣ ಸಿಸಿಟಿವಿ ವೈರ್ ಕತ್ತರಿಸಿ ನಂತರ ಕೊಲೆ ಮಾಡಿ ಪಾರಾರಿಯಾಗಿದ್ದಾರೆ. ಇಂದಿರಾನಗರದ ಮಲ್ಲೆಶ್ ಅಂಡ್ ಗ್ಯಾಂಗ್ ಪಳನಿ ಕಳೆದ ಬಾರಿಯೂ ಅಟ್ಯಾಕ್ ಮಾಡಲಾಗಿತ್ತು, ಇದೀಗ ಪಳನಿ ಹತ್ಯೆಯಾಗಿದೆ. ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ