ಮೀರಾ ಕುಮಾರ್ ರಾಷ್ಟ್ರಪತಿ ಅಭ್ಯರ್ಥಿ !

Kannada News

22-06-2017

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರಪತಿ ಆಭ್ಯರ್ಥಿ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ  ಮಾಜಿ ಲೋಕಸಭಾ ಅಧ್ಯಕ್ಷರಾದಂತಹ ಮೀರಾಕುಮಾರ್ ಅವರನ್ನು ಅಂತಿಮಗೊಳಿಸಿದ್ದಾರೆ. ಇಂದು ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಪಕ್ಷ ಮೀರಾ ಕುಮರ್ ಅವರು ರಾಷ್ಟ್ರಪತಿ ಅಭ್ಯರ್ಥಿ ಎಂದು ಅಧೀಕೃತವಾಗಿ ಘೋಷಿಸಿದ್ದಾರೆ. ಇವರ ಹೆಸರನ್ನು ಕಾಂಗ್ರೆಸ್ ನ ಹಿರಿಯ ನಾಯಕರಾದಂತಹ ಗುಲಾಮ್ ನಬಿ ಆಜಾದ್ ಆವರು ಸೂಚಿಸಿರುವುದಾಗಿ ತಿಳಿದು ಬಂದಿದೆ. ಅಭ್ಯರ್ಥಿಯ ಆಯ್ಕೆಗೆ ನಡೆದ ಪಕ್ಷದ ಸಭೆಯಲ್ಲಿ ಸುಶೀಲ್ ಕುಮಾರ್ ಶಿಂಧೆ, ಪ್ರಕಾಶ್ ಅಂಬೇಡ್ಕರ್ ಅವರ ಹೆಸರುಗಳು ಕೇಳಿಬಂದಿದ್ದು ಕೊನೆಯದಾಗಿ ಮೀರಾ ಕುಮಾರ್ ಅವರ ಪರವಾಗಿ ಒಲವು ತೋರಿದ್ದಾರೆ. ಮೀರಾ ಕುಮಾರ್ ಅವರು 2009 ರಿಂದ 2014 ರ ವರೆಗೆ ಲೋಕಸಭೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಪ್ರಮುಖವಾಗಿ ಅವರು ಸ್ವಾತಂತ್ರ್ಯ ಹೋರಾಟಗಾ ಮತ್ತು ಮಾಜಿ ಉಪ ಪ್ರಧಾನಿಯಾದ ಬಾಬು ಜಗಜೀವನ್ ರಾಮ್ ಅವರ ಮಗಳಾಗಿದ್ದಾರೆ. ಇವರೂ ಕೂಡ ದಲಿತ ಸಮುದಾಯದವರಾಗಿದ್ದೂ, ಬಿಜೆಪಿ ಪಕ್ಷದ ರಾಮ್ ನಾಥ್ ಕೊವಿಂದ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಚಾವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಭ್ಯರ್ಥಿಯಾದ ಮೀರಾ ಕುಮಾರ್ ಹೆಚ್ಚು ಜನಪ್ರಿಯ ನಾಯಕಿ ಎಂದಿದ್ದಾರೆ. ಅಲ್ಲದೇ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮೀರಾ ಕುಮಾರ್ ಅವರನ್ನು ಬೆಂಬಲಿಸುವಂತೆ ರಾಷ್ಟ್ರೀಯ ಪಕ್ಷಗಳನ್ನು ಕೋರಿದ್ದಾರೆ.        ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ