ಜೆಡಿಎಸ್ ಮುಖಂಡರ ಪ್ರತಿಭಟನೆ !

Kannada News

22-06-2017

ಕೋಲಾರ: ಪೊಲೀಸ್ ಠಾಣೆ ಎದುರೇ ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಕೋಲಾರ ಎಸ್.ಪಿ ಕಚೇರಿ ಎದುರು ಜೆಡಿಎಸ್ ಮುಖಂಡರ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಸಂಜೆ ಕೋಲಾರ ನಗರ ಠಾಣೆ ಎದುರೇ ಪರಸ್ಪರ ಮಾರಾಮಾರಿ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ಕೋರರನ್ನ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಮುಖಂಡರು ಒತ್ತಾಯಿಸಿದ್ದಾರೆ. ಪೊಲೀಸ್ ಠಾಣೆಯಲ್ಲೇ ಮಾರಾಮಾರಿ ನಡೆದರೂ ಪೊಲೀಸರು ಪ್ರಕರಣ ದಾಖಲು ಮಾಡಿಲ್ಲ. ಶಾಸಕ ವರ್ತೂರು ಪ್ರಕಾಶ್ ಕೈಗೊಂಬೆಯಂತೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೋಲಾರ ನಗರಸಭೆ ವಾರ್ಡ್ ನಂ.21 ಉಪ ಚುನಾವಣೆ ನಿಮಿತ್ತ ಮತದಾರರ ಪಟ್ಟಿ ಬದಲಾವಣೆ ಹಿನ್ನೆಲೆ ಮಾರಾಮಾರಿ ನಡೆದಿತ್ತು. ಕೆಲ ಮತದಾರರನ್ನು  ಬೇರೆಡೆ ಮತ ಪಟ್ಟಿಯಲ್ಲಿ ಸೇರಿಸಲಾಗಿದೆ, ಎಂದು ಕಾಂಗ್ರೆಸ್ ಬೆಂಬಲಿಗರು ಅರೋಪಿಸಿದ್ದಾರೆ. ಪೊಲೀಸ್ ಠಾಣೆ ಯಲ್ಲಿ ಪೊಲೀಸರ ಎದುರೇ ಪರಸ್ಪರ ಬಡಿದಾಡಿಕೊಂಡಿದ್ದ ಕಾರ್ಯಕರ್ತರು. ಮಾರಾಮಾರಿಯ ಹೈಡ್ರಾಮ ನೋಡುತ್ತಾ ಕೋಲಾರ ನಗರ ಪೊಲೀಸರು ನಿಂತ್ತಿದ್ದರು ಎಂದು ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ