ವೇಶ್ಯಾವಾಟಿಕೆ ದಂಧೆ 4 ಯುವತಿಯರ ರಕ್ಷಣೆ !

Kannada News

22-06-2017 166

ಬೆಂಗಳೂರು: ಕಮ್ಮನಹಳ್ಳಿ ಮುಖ್ಯರಸ್ತೆಯ ರಾಮಯ್ಯ ಲೇಔಟ್ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಗುಂಡ್ಲುಪೇಟೆಯ ಕಬ್ಬಳ್ಳಿಯ ಶಿವಮಲ್ಲಪ್ಪ (32), ಹೊಸಕೆರೆ ಹಳ್ಳಿಯ ಹರೀಶ್ ಅಲಿಯಾಸ್ ಪ್ರವೀಣ್ (29) ಬಂಧಿತ ಆರೋಪಿಗಳಾಗಿದ್ದು, ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಅಂಕಲ್‍ ಕುಮಾರ್ ಗಾಗಿ ಶೋಧ  ಕಾರ್ಯ ನಡೆಸಲಾಗಿದೆ. ಆರೋಪಿಗಳು ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಬಂಧಿತರಿಂದ 3 ಸಾವಿರ ನಗದು, 3 ಮೊಬೈಲ್‍ಗಳು, ಸ್ವೇಫಿಂಗ್ ಯಂತ್ರವನ್ನು ವಶಪಡಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ