ನಿಶ್ಚಿತಾರ್ಥ ಮಾಡಿಕೊಂಡಿದ್ದವಳ ಮೇಲೆಯೇ ಅತ್ಯಾಚಾರ !

Kannada News

22-06-2017

ಬೆಂಗಳೂರು: ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ  ಭಾವಿಪತ್ನಿ ಮೇಲೆಯೇ ಯುವಕನೊಬ್ಬ ಅತ್ಯಾಚಾರವೆಸಗಿರುವ ಹೀನ ಕೃತ್ಯ ವಿಜಯನಗರದಲ್ಲಿ ನಡೆದಿದೆ. ವಿಜಯನಗರದ ಸುರೇಶ್ ಅತ್ಯಾಚಾರ ವೆಸಗಿದ ಆರೋಪಿಯಾಗಿದ್ದಾನೆ, ಮನೆಯಲ್ಲಿ ಯಾರು ಇಲ್ಲದ ವೇಳೆ ಚಾಕು ತೋರಿಸಿ ಈತ ದುಷ್ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಯೊಂದಿಗೆ ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದ ಆರೋಪಿಯು, ಮದುವೆಯಾಗುವುದಾಗಿ ನಂಬಿಸಿ ಈ ದುಷ್ಕೃತ್ಯ ಎಸಗಿದ್ದಾನೆ. ಅತ್ಯಾಚಾರದಿಂದ ಯುವತಿ ಗರ್ಭಿಣಿಯಾಗಿರುವುದು ಗೊತ್ತಾದಾಗ ಒತ್ತಾಯದಿಂದ ಗರ್ಭಪಾತ ಕೂಡ ಮಾಡಿಸಿದ್ದ, ಆರೋಪಿಯು ಕೆಲ ದಿನಗಳ ನಂತರ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಕಂಗಾಲಾದ ಸಂತ್ರಸ್ಥೆ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಯುವತಿಯ ದೂರನ್ನು ಆಧರಿಸಿ ಸುರೇಶ್‍ನನ್ನು ವಶಕ್ಕೆ ತೆಗೆದುಕೊಂಡಿರುವ ವಿಜಯನಗರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ