ಅಂಗಡಿ ಶೆಟರ್ ಮುರಿದು ಕಳ್ಳತನ !

Kannada News

22-06-2017

ಬೆಂಗಳೂರು:  ಸಿಟಿ ಮಾರುಕಟ್ಟೆಯ ನಂಬೂದರಿ ಮಾರುಕಟ್ಟೆಯಲ್ಲಿ ಸರಣಿ ಅಂಗಡಿಗಳ ಕಳ್ಳತನ ನಡೆದಿದ್ದು, ಮಾರುಕಟ್ಟೆಯ 4 ಅಂಗಡಿಗಳ ರೋಲಿಂಗ್ ಶೆಟರ್ ಮುರಿದ ದುಷ್ಕರ್ಮಿಗಳು ಸರಣಿ  ಕಳ್ಳತನ ಮಾಡಿದ್ದಾರೆ. ಕಳ್ಳರು ಸುಮಾರು 7 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿರುವುದು ತಿಳಿದು ಬಂದಿದೆ. ನಂಬೂದರಿ ಮಾರುಕಟ್ಟೆಯ ವಿ.ಎನ್. ಶೆಟ್ಟಿ ಲೇನ್ ನಲ್ಲಿರುವ ಸ್ವರಾಜ್ ಪ್ಲಾಸ್ಟಿಕ್ ಶಾಪ್, ರಾಕೇಶ್ ಟೆಕ್ಟೈಲ್ಸ್, ಟೆಸ್ ಟ್ರಾವೆಲ್ಸ್ ಅಂಗಡಿಗಳ ರೋಲಿಂಗ್ ಶೆಟರನ್ನು ಕಳೆದ ಸೋಮವಾರ ಮಧ್ಯರಾತ್ರಿ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು 7 ಲಕ್ಷ ನಗದು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಸ್ವರಾಜ್ ಪ್ಲಾಸ್ಟಿಕ್ ಶಾಪ್‍ನಲ್ಲಿ 3 ಲಕ್ಷ, ರಾಕೇಶ್ ಟೆಕ್ಸ್‍ಟೈಲ್ಸ್‍ನಲ್ಲಿ 2 ಲಕ್ಷ 78 ಸಾವಿರ, ಟೆಸ್ ಟ್ರಾವೆಲ್ಸ್‍ ನಲ್ಲಿ 1 ಲಕ್ಷ 24 ಸಾವಿರ, ರಾಕೇಶ್ ಎಂಟಪ್ರ್ರೈಸೆಸ್‍ನಲ್ಲಿ 53 ಸಾವಿರ ನಗದನ್ನು ದೋಚಲಾಗಿದೆ. ಈ ಸಂಬಂಧ ಸ್ವರಾಜ್ ಪ್ಲಾಸ್ಟಿಕ್ ಶಾಪ್‍ನ ಮಾಲೀಕ ಲಲಿತ್ ಕುಮಾರ್ ಅವರು ನೀಡಿರುವ ದೂರು ದಾಖಲಿಸಿರುವ ಸಿಟಿ ಮಾರುಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ