ಅಮಲು ತಂದ ಆಪತ್ತು !

Kannada News

22-06-2017

ಬೆಂಗಳೂರು: ಕುಡಿತದ ಅಮಲು ಸಾಫ್ಟ್ ವೇರ್ ಎಂಜಿನಿಯರೊಬ್ಬರನ್ನು ಬಲಿ ತೆಗೆದುಕೊಂಡಿದೆ. ಯಶವಂತಪುರದ 3ನೇ ಮುಖ್ಯರಸ್ತೆಯ ಮನೆಯಲ್ಲಿ ಬುಧವಾರ ಮಧ್ಯರಾತ್ರಿಯವರೆಗೆ ಕಂಠಪೂರ್ತಿ ಕುಡಿದು ಮನೆಯ ಹೊರಗಡೆ ಬಂದಿದ್ದ ಸಾಫ್ಟ್ ವೇರ್ ಎಂಜಿನಿಯರ್,  ಆಯ ತಪ್ಪಿ ಮೂರನೇ ಮಹಡಿಯಿಂದ ವಿದ್ಯುತ್ ತಂತಿಯ ಮೇಲೆ ಬಿದ್ದು ಮೃತಪಟ್ಟಿದ್ದಾರೆ. ಐಟಿಪಿಎಲ್‍ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಉತ್ತರಪ್ರದೇಶ ಮೂಲದ ವಿದ್ಯಾಶಂಕರ್ ಮಿಶ್ರಾ (31) ಮೃತಪಟ್ಟವರು. ಸಹೋದರ ವಿದ್ಯಾ ದೀಪಕ್ ಮಿಶ್ರಾ ಅವರೊಂದಿಗೆ ಯಶವಂತಪುರದ 3ನೇ ಮುಖ್ಯರಸ್ತೆಯ ಮನೆಯೊಂದರ 3ನೇ ಮಹಡಿಯಲ್ಲಿ ವಾಸಿಸುತ್ತಿದ್ದ. ವಿದ್ಯಾಶಂಕರ್ ಮಿಶ್ರಾ ರಾತ್ರಿ 1ರ ವರೆಗೆ ಮದ್ಯಪಾನ ಮಾಡಿದ್ದಾನೆ. ಆನಂತರ ಅಡುಗೆಯವರು ಇಟ್ಟಿದ್ದ ಊಟವನ್ನು ಅರ್ಧಂಬರ್ಧ ತಿಂದು ಕುಡಿತದ ಅಮಲಿನಲ್ಲಿ ಹೊರಗೆ ಬಂದಿದ್ದ ಈ ವೇಳೆ ಮಿಶ್ರಾ ಆಯ ತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಲಗಿದ್ದ ತಮ್ಮ ಮುಂಜಾನೆ 6 ರ ವೇಳೆ ಅಣ್ಣ ಕಾಣಲಿಲ್ಲ ಹೊರಗೆ ಬಂದು ನೋಡಿದಾಗ ಆತ ವಿದ್ಯುತ್ ತಂತಿ ಮೇಲೆ ನೇತಾಡುತ್ತಿದ್ದ. ಪ್ರಕರಣ ದಾಖಲಿಸಿರುವ ಯಶವಂತಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಅಮಲು ತಂದ ಆಪತ್ತು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ