ಸದ್ಯಕ್ಕೆ ನಾನು ರಾಜಕೀಯ ಸೇರುವುದಿಲ್ಲ !

Kannada News

22-06-2017 145

ಮೈಸೂರು: ಮೈಸೂರು ರಾಜಮನೆತನದ ಸೊಸೆ ತ್ರಿಷಿಕಾಕುಮಾರಿ ತಾಯಿಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯದುವೀರ್. ಮೈಸೂರು ರಾಜಮನೆತನಕ್ಕೆ ಮುಂಬರುವ ದಿನಗಳಲ್ಲಿ ಹೊಸ ಅತಿಥಿಯೊಬ್ಬರ ಸೇರ್ಪಡೆಯಾಗಲಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಾಚಿಕೆಯಿಂದಲೇ ಯದುವೀರ್, ಇದು ನಮ್ಮ ವೈಯುಕ್ತಿಕ ವಿಚಾರ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಮ್ಮ ವೈಯುಕ್ತಿಕ ವಿಷಯದ ಬಗ್ಗೆ ಮಾತನಾಡಲು ಬೇರೆ ಯಾರಿಗೂ ಅಧಿಕಾರ ಕೊಟ್ಟಿಲ್ಲ ಎಂದಿದ್ದಾರೆ. ಮತ್ತು ನಾನು ನಿಮ್ಮ ಗೆರೆಯನ್ನು ದಾಟುವುದಿಲ್ಲ, ನೀವು ನನ್ನ ಗೆರೆಯನ್ನು ದಾಟಬೇಡಿ ಎಂದು ಹೇಳಿದ್ದಾರೆ. ಇನ್ನು ರಾಜಕೀಯ ಪ್ರವೇಶದ ಬಗ್ಗೆ, ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸದ್ಯಕ್ಕೆ ರಾಜಕೀಯ ಸೇರುವುದಿಲ್ಲ, ರಾಜಕೀಯ ಸೇರುವ ಆಸಕ್ತಿಯೂ ನನಗಿಲ್ಲ. ನನಗೆ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಖುಷಿ ಕೊಟ್ಟಿದೆ. ಮುಂಬರುವ ದಿನಗಳಲ್ಲೂ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನೀಗ ಸ್ವಯಂ ಸೇವಾ ಸಂಸ್ಥೆಯ ಶೈಕ್ಷಣಿಕ ರಾಯಭಾರಿಯಾಗಿದ್ದೇನೆ, ಆ ಮೂಲಕ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಈ ಕಾರ್ಯ ನನಗೆ ಹೆಚ್ಚು ಸಂತಸ ತಂದಿದೆ ಎಂದು ಉತ್ತರಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ