ರೈತ ಆತ್ಮ ಹತ್ಯೆಗೆ ಶರಣು !

Kannada News

22-06-2017

ರಾಯಚೂರು: ಜಿಲ್ಲೆಯಲ್ಲಿ ಮುಂದುವರೆದ ಅನ್ನದಾತರ ಸರಣಿ ಆತ್ಮಹತ್ಯೆ. ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಮಾನವೀಯ ಜೀನೂರು ಗ್ರಾಮದಲ್ಲಿ  ಈ ಘಟನೆ ನಡೆದಿದೆ. ನಾಗರಾಜ (೩೪) ಮೃತ ರೈತ. ಬ್ಯಾಂಕ್ ಮತ್ತು  ಕೈ ಸಾಲ ಸೇರಿ ಸುಮಾರು ೨ ಲಕ್ಷ ಸಾಲ ಮಾಡಿಕೊಂಡಿದ್ದರು. ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಬರಲಾಂಭಿಸಿದ್ದು, ಮತ್ತು ಇತರೆಡೆ ಸಾಲ ಮಾಡಿಕೊಂಡಿದ್ದರಿಂದ ನೊಂದ ರೈತ ಕ್ರಿಮಿನಾಶಕ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ರಾಯಚೂರಿನ ಮಾನವೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆಯಷ್ಟೆ ಸಿಎಂ ಸಿದ್ದರಾಮಯ್ಯನವರು ರಾಜ್ಯದ 50 ಸಾವಿರ ಒಳಗಿನ ಎಲ್ಲಾ ರೈತರ ಸಾಲ ಮನ್ನಾ ಮಾಡಿದ್ದರು, ಇದರ ಬೆನ್ನಲ್ಲೆ ಸಾಲ ಮನ್ನಾ ಪ್ರಮಾಣ ಹೆಚ್ಚು ಮಾಡಬೇಕೆಂಬ ಕೂಗು ರೈತಾಪಿ ವರ್ಗದಿಂದಲೂ ಕೇಳಿ ಬರುತ್ತಿದ್ದೂ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದೆ.  


ಸಂಬಂಧಿತ ಟ್ಯಾಗ್ಗಳು

ರಾಯಚೂರು ರೈತ ಆತ್ಮ ಹತ್ಯೆಗೆ ಶರಣು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ