ಶಾರ್ಟ್ ಸರ್ಕ್ಯೂಟ್ ಗೆ ಕೂಲಿ ಕಾರ್ಮಿಕ ಸಾವು !

Kannada News

22-06-2017

ಕೋಲಾರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ, ಕೋಲಾರ ತಾಲ್ಲೂಕಿನ ಗರುಡನಹಳ್ಳಿ ಗೇಟ್ ಬಳಿಯ,ನಿರ್ಮಾಣ ಹಂತದ ಕರ್ಖಾನೆಯಲ್ಲಿ ನಡೆದಿದೆ. ಗಂಗಾವತಿ ಮೂಲದ ಧರ್ಮಣ್ಣ(25) ಮೃತ ಕೂಲಿ ಕಾರ್ಮಿಕ. ಈತ ಗಡುರನಹಳ್ಳಿ ಗೇಟ್ ಬಳಿ ನಿರ್ಮಾಣ ಹಂತದಲ್ಲಿರುವ ಸ್ಪಂಜ್ ಫಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಈತನು ಹೊಟ್ಟೆಪಾಡಿಗಾಗಿ ಕೂಲಿಗೆಂದು ಗಂಗಾವತಿಯಿಂದ ಬಂದಿದ್ದು ಇದೀಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೃತಪಟ್ಟಿದ್ದಾರೆ. ಮೃತ ಧರ್ಮಣ್ಣನಿಗೆ ಒಂದು ವರ್ಷದ ಮಗು ಇದ್ದು, ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.                     ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ