ಹೆಂಡತಿಯಿಂದಲೇ ಗಂಡನ ಕೊಲೆ !

Kannada News

22-06-2017

ಬಳ್ಳಾರಿ: ಪತಿಯನ್ನೇ ಪತ್ನಿ ಕೊಂದ ದಾರುಣ ಘಟನೆಯೊಂದು ನಡೆದಿದೆ. ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನ ಕೆ.ಸೂಗೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗಂಡನನ್ನು ಇರಿದು ಕೊಂದ ಪತ್ನಿ ಅನಿತಮ್ಮ, ಇವರ ಪತಿಯಾದ ಈರನಾಗಪ್ಪ(೨೫) ಕೊಲೆಯಾದ ವ್ಯಕ್ತಿ. ತಡರಾತ್ರಿ ನಡೆದ ಜಗಳದಲ್ಲಿ ಗಂಡನ ಕುತ್ತಿಗೆಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಪ್ರತೀದಿನ ಕುಡಿದು ಬಂದು, ಮನೆಯಲ್ಲಿ ನೆಮ್ಮದಿ ಹಾಳು ಮಾಡುವುದಲ್ಲದೇ, ಹೊಡೆದು ತೊಂದರೆ ಕೊಡುತ್ತಿದ್ದರಿಂದ ಬೇಸತ್ತು  ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಸಿರಗುಪ್ಪ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.        ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ