ಸಿಎಂ ನಿವಾಸದ ಮುಂದೆ ರೈತರ ಸಂಭ್ರಮ !

Kannada News

22-06-2017

ಬೆಂಗಳೂರು: ನೆನ್ನೆಯಷ್ಟೆ ಸಿಎಂ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡಿದ್ದ ಹಿನ್ನೆಲೆಯಲ್ಲಿ, ಇಂದು  ಸಿಎಂ ನಿವಾಸದೆದುರು ರೈತರ ಸಂಭ್ರಮಾಚರಣೆ ಮಾಡಿದರು. ಸಿಎಂ ಸಿದ್ದರಾಮಯ್ಯರಂತೆ ಪಂಚೆ ಶಲ್ಯ ಹಾಕಿಕೊಂಡು ಬಂದ ಯೂತ್ ಕಾಂಗ್ರೆಸ್ ಕಾರ್ಯಕರ್ತರು. ಸಿಎಂ ಅವರಿಗೆ ಬಸವಣ್ಣ ಮೂರ್ತಿ ಉಡುಗೊರೆಯಾಗಿ ನೀಡಲು ಕಾರ್ಯಕರ್ತರು ಮುಂದಾದರು. ಸಿಎಂ ನಿವಾಸ ಕಾವೇರಿ ಎದುರು ಕಾರ್ಯಕರ್ತರು ಕುಣಿದು ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಗಮಿಸಿರುವ ನೂರಾರು ರೈತರು. ಸಿಎಂ ರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತಿದ್ದರು. ಅಲ್ಲದೇ, ಕೆಲ ರೈತರು ಮತ್ತಷ್ಟು ಸಾಲಮನ್ನಾ ಮಾಡುವಂತೆ ಮನವಿ ನೀಡಲು ಆಗಮಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ