ಅವ್ಯವಸ್ಥೆಯ ಆಗರ. ಈ ನಾಗರ ಹೊಳೆ !

Kannada News

22-06-2017

ಮಡಿಕೇರಿ: ರಾಷ್ಟ್ರ ಪ್ರಸಿದ್ಧವಾದ ನಾಗರಹೊಳೆಯಲ್ಲಿ ಸರಕಾರ, ಮರಗಳ್ಳರು, ವನ್ಯಜೀವಿ ಬೇಟೆಗಾರರನ್ನು ಮಟ್ಟಹಾಕಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ಹಲವು ಬಗೆಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರಲ್ಲಿ ಅತ್ಯಾಧುನಿಕ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿ ಕಳ್ಳರ ಮೇಲೆ ಹದ್ದುಗಣ್ಣನ್ನು ಇರಿಸಲಾಗಿದೆ. "ಗಸ್ತು "ಎನ್ನುವ ಸಾಫ್ಟ್ ವೇರ್ ಅನ್ನು ಟ್ಯಾಬ್ ಗಳ ಮೂಲಕ ಅಳವಡಿಸಿ ಯಾವುದೇ ಸಾರ್ವಜನಿಕ ಕಾರು ಹಾಗು ಬಸ್ಸುಗಳು ಕೊಡಗಿನಿಂದ, ಗೇಟಿನ ಮುಖಂತರ ಮೈಸೂರು ಹಾಗು ಹುಣಸೂರು ಕಡೆಗೆ ಹಾದು ಹೋಗುವಾಗ ಅದರ ನೊಂದಣಿ ಸಂಖ್ಯೆ ಹಾಗು ಡ್ರೈವರಿನ ಹೆಸರನ್ನು ನಮೂದಿಸಲಾಗುತ್ತದೆ. ಹಾಗೇ ನೊಂದಣಿಯಾದ ವಾಹನವು ಮೈಸೂರಿನ ಕಡೆಯ ಗೇಟಿಗೆ  ನಲ್ವತೈದು ನಿಮಿಷ, ಹಾಗೂ  ಕಲ್ಲಾಳ ತಿತಿಮತಿ ಗೇಟಿಗೆ ಒಂದು ಗಂಟೆಯ  ಒಳಗೆ ತಲುಪಿ ಟಿಕೇಟನ್ನು ಗೇಟಿನಲ್ಲಿ ನೀಡಬೇಕು. ನಿಯಮ ಉಲ್ಲಂಘನೆ ಆದರೆ ಅದಕ್ಕೆ ಸರಿಯಾದ  ಕಾರಣವನ್ನು ಕೈ ಬರಹದ ಮೂಲಕ ನೀಡಬೇಕಾಗುತ್ತದೆ. ಕಾರಣವಿಲ್ಲದೆ ಅಡ್ಡಾಡಿ ಬಂದಲ್ಲಿ ದಂಡವನ್ನು ತೆರಬೇಕಾಗುತ್ತದೆ. ಕಾರು, ಬಸ್ಸು , ಹಾಗು ಪ್ರಯಾಣಿಕರ ವಾಹನಗಳನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಸರಕು ಸಾಗಣೆ ವಾಹನವನ್ನು ಮತ್ತು ಬೈಕುಗಳನ್ನು ಯಾವುದೇ ಕಾರಣಕ್ಕೂ ಒಳಗೆ   ಬಿಡುವುದಿಲ್ಲ . ಆದರೆ ಈ ಎಲ್ಲಾ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿ ಸರಕಾರ ಒಂದು ಗೇಟಿಗೆ ಮೂರು, ಸಿಬ್ಬಂದಿಗಳನ್ನು ನಿಯೋಜಿಸಿ ಕೋಟ್ಯಂತರ ರೂಪಾಯಿ ಖರ್ಚುಮಾಡಿದರು, ಅಲ್ಲಿನ ಸಿಬ್ಬಂದಿಗಳು ಸರಕಾರದ ನಿಯಮವನ್ನು ಗಾಳಿಗೆ ತೂರಿ ತಮಗೆ ಬೇಕಾದ ಪ್ರಭಾವಿಗಳ  ಸರಕು  ಸಾಗಣೆ ವಾಹನಗಳನ್ನು ಹಾಡ ಹಗಲೇ  ಒಳಗೆ ಕಳುಹಿಸಲಾಗುತ್ತದೆ .ಅದನ್ನು ಕಣ್ಣಾರೆ ಕಂಡು ಸಿಬ್ಬಂದಿಗಳನ್ನು ಕೇಳಿದಾಗ "ಹೋಗ್ರಿ ರೇಂಜರ್ ಅನ್ನು ಕೇಳ್ರಿ. ಇದನ್ನು ಕೇಳೋಕೆ ನೀವ್ ಯಾರು "ಎನ್ನುವ  ಉಡಾಫೆಯ ಉತ್ತರವನ್ನು ನೀಡುತ್ತಾರೆ. ಆದ್ದರಿಂದ ಇಲ್ಲಿ ನೆಡೆಯುತ್ತಿರುವ ಅಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಎಚ್ಚೆತ್ತುಕೊಂಡು, ಈ ಅಕ್ರಮಗಳನ್ನು ತಡೆಹಿಡಿದರೆ ಮಾತ್ರ ನಾಗರಹೊಳೆ ವನ್ಯಧಾಮ ಉಳಿದೀತು . 

  ವರದಿ: ಪಪ್ಪು ತಿಮ್ಮಯಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ