ಡಾ.ಗಂಗೂಭಾಯಿ ಅವರ ವಿಶ್ವವಿದ್ಯಾಲಯದಿಂದ ಯಾರಿಗೆ ಉಪಯೋಗ ?

Kannada News

21-06-2017

ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಡಾ.ಗಂಗೂಭಾಯಿ ಹಾನಗಲ್  ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಯಾರಿಗೆ ಉಪಯೋಗವಾಗುತ್ತಿದೆ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮೇಲ್ಮನೆಯಲ್ಲಿಂದು ತರಾಟೆಗೆ ತೆಗೆದುಕೊಂಡರು. ಡಾ.ಗಂಗೂಭಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2017 ರ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ಈ ವಿ.ವಿ.ಯಿಂದ ಜನ ಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ. ವಿವಿಯಲ್ಲಿ ಏನಾಗುತ್ತಿದೆ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವಿವಿ ವ್ಯಾಪ್ತಿಯಲ್ಲಿ ಎಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ, ರಾಜ್ಯದ ಜನರಿಗೆ ಈ ವಿವಿಯಿಂದ ಜನರಿಗೆ ಸಂಗೀತ, ಕಲೆಯ ಬಗ್ಗೆ ತಿಳಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಎಲ್ಲ ವಿಶ್ವವಿದ್ಯಾಲಯ ಕುಲಪತಿಗಳ ವಯೋಮಿತಿ ಸಮಾನವಾಗಿರಲಿ. ಒಂದೇ ಬಾರಿ ಈ ರೀತಿಯ ತಿದ್ದುಪಡಿ ತನ್ನಿ ಪದೇ ಪದೇ ಬದಲಾವಣೆ ಬೇಡ ಎಂದು ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅವರು ಸಲಹೆ ನೀಡಿದರು. ಚರ್ಚೆಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಯುಜಿಸಿ ನಿಯಮಾವಳಿ ಪ್ರಕಾರ ವಿವಿ ಕುಲಪತಿಗಳಿಗೆ ದೇಶವ್ಯಾಪಿ ಏಕರೂಪದ ವಯೋಮಿತಿ ನಿಗದಿಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಗೀತ ವಿವಿ ಕುಲಪತಿಗಳ ವಯೋಮಿತಿ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು. ಚರ್ಚೆಯ ನಂತರ ವಿಧೇಯಕವನ್ನು ಅಂಗೀಕರಿಸಲಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ