ಪುತ್ರನ ಸಂಗೀತ ಕ್ಷೇತ್ರ ಬೆಳವಣಿಗೆಗಾಗಿ ಲಂಚ !

Kannada News

21-06-2017

ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಐ.ಎ.ಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರು ತಮ್ಮ ಪುತ್ರನ ಸಂಗೀತ ಕ್ಷೇತ್ರದ ಬೆಳವಣಿಗೆಗಾಗಿ 40 ಲಕ್ಷ ಲಂಚ ಪಡೆದಿರುವುದು ವಿಶೇಷ ತನಿಖಾ ತಂಡ (ಎಸ್‍ಐಟಿ)ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಪತ್ತೆಯಾಗಿದೆ. ಗಂಗಾರಾಮ್ ಬಡೇರಿಯಾ ಅವರು ತೆಗೆದುಕೊಂಡ ಲಂಚದ ಹಣವನ್ನು ಪಡೆದಿರುವ ಅವರ ಪುತ್ರ ಗಗನ್ ಬಡೇರಿಯಾಗೆ ಬಂಧನದ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಂತಕಲ್ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‍ಐಟಿ)ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಜಂತಕಲ್ ಗಣಿ ಕಂಪನಿ ಮಾಲೀಕ ವಿನೋದ್ ಗೋಯಾಲ್ ಲಂಚ ನೀಡಿದ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ರನ ಸಂಗೀತ ಕ್ಷೇತ್ರದ ಬೆಳವಣಿಗೆಗಾಗಿ  ಲಂಚದ ಬೇಡಿಕೆ ಇಟ್ಟಿದ್ದ ಗಂಗಾರಾಮ್ ಬಡೇರಿಯಾ, ಚೆಕ್ ಮೂಲಕ ಎರಡು ಬಾರಿ ತಲಾ 20 ರಂತೆ 40 ಲಕ್ಷ ಲಂಚ ಪಡೆದಿದ್ದಾರೆ. ಇದಲ್ಲದೇ ಗಂಗರಾಮ್ ಅವರು ಪುತ್ರನ ಗಗನ್ ಬಡೆರೀಯಾ ಖರ್ಚಿಗಾಗಿ ಹಣ ಕೇಳಿದ್ದರು ಎಂದು ವಿನೋದ್ ಗೋಯಾಲ್ ವಿಚಾರಣೆಯಲ್ಲಿ ಆರೋಪಿಸಿದ್ದಾರೆ.ಲಂಚದ ಹಣವನ್ನು 2007 ರಲ್ಲಿ ಗಂಗರಾಮ್ ಬಡೆರೀಯಾರ ರಿಚ್ಮಂಡ್ ಟೌನ್ ಮತ್ತು ಹೆಚ್‍ಎಸ್‍ಅರ್ ಲೇಔಟ್‍ನಲ್ಲಿ ಹೊಂದಿದ್ದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ  ಮಾಡಿರುವುದನ್ನು ವಿನೋದ್ ಗೋಯಾಲ್ ಬಾಯ್ಬಿಟ್ಟಿದ್ದಾರೆ. ಇದಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳನ್ನು ವಿನೋದ್ ಗೋಯಾಲ್ ನೀಡಿದ್ದು ಅವುಗಳನ್ನು ಆಧರಿಸಿ ಎಸ್‍ಐಟಿ ಅಧಿಕಾರಿಗಳು ತನಿಖೆ ತೀವ್ರ ಗೊಳಿಸಿದ್ದಾರೆ.ಜಂತಕಲ್ ಗಣಿಗಾರಿಕೆ ಪ್ರಕರಣದಲ್ಲಿ  ಸದ್ಯ ಗಂಗರಾಮ್ ಬಡರೀಯಾ ಬಂಧನವಾಗಿದ್ದು,ಲಂಚದ ಹಣ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಅವರ ಪುತ್ರ ಗಗನ್‍ಗೆ ಬಂಧನದ ಭೀತಿ ಶುರುವಾಗಿದೆ. ಈಗಾಗಲೇ ಗಗನ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಎಸ್‍ಐಟಿಯಿಂದ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಇದೇ ಮೂಲಗಳು ತಿಳಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ