ಉರ್ಜಿತ್ ಪಟೇಲ್ ಅವರನ್ನು ಗಡಿ ಪಾರು ಮಾಡಿ !

Kannada News

21-06-2017

ಬೆಳಗಾವಿ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು ಸ್ವಾಗತಾರ್ಹ ಎಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ  ಜೆಡಿಎಸ್ ಕಾರ್ಯಕರ್ತರ ಪ್ರತಿಭಟನಾ ರ಼್ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಂದರಿಂದ ಎರಡು ಲಕ್ಷ್ಯದವರೆಗೆ ಸಾಲ ಮನ್ನಾ ಮಾಡಲಾಗಿದೆ ರಾಜ್ಯದಲ್ಲಿ ಮಾತ್ರ ಸಹಕಾರಿ ಬ್ಯಾಂಕ್ ಗಳ 50 ಸಾವಿರ ವರೆಗಿನ ಸಾಲ ಮಾತ್ರ ಮನ್ನಾ ಮಾಡಿದೆ. ಸಾಲ ಮನ್ನಾ ಮೀತಿ ಬೇರೆ ರಾಜ್ಯಗಳಂತೆ ನಮ್ಮ ರಾಜ್ಯ ಸರ್ಕಾರವು, ಸಾಲ ಮನ್ನಾ ಮೀತಿಯನ್ನು ಹೆಚ್ಚಿಸಬೇಕು ಎಂದಿದ್ದಾರೆ. ಆರ್.ಬಿ.ಐ ಗವರ್ನರ್‌ ಉರ್ಜಿತ್ ಪಟೇಲ ರೈತರ ಸಾಲ ಮನ್ನಾ ಬಗ್ಗೆ ನೀಡಿರುವ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿದರೆ ಬ್ಯಾಂಕ್ ಗಳು ದಿವಾಳಿ ಎಂದು ಹೇಳಿದ್ದು ಉದ್ದಟತನ ಹೇಳಿಕೆ. ಸಾವಿರಾರು ಕೋಟಿ ರೂಪಾಯಿ ಉದ್ಯಮಿಗಳ ಸಾಲ ಮನ್ನಾ ಮಾಡಿದಾಗ ಆಗದ ಬ್ಯಾಂಕ್ ದಿವಾಳಿ ಈಗ ಆಗುತ್ತದೆಯೇ..? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ  ಉರ್ಜಿತ್ ಪಟೇಲ್ ನನ್ನು ದೇಶದಿಂದ ಗಡಿ ಪಾರು ಮಾಡಲು ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ