ರೌಡಿ ಶೀಟರ್ ನ ಬರ್ಬರ ಹತ್ಯೆ !

Kannada News

21-06-2017

ದಕ್ಷಿಣ ಕನ್ನಡ: ರೌಡಿ ಶೀಟರ್ ಒಬ್ಬನನ್ನು ಬಂಟ್ವಾಳದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಂಟ್ವಾಳ ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿ ಅಶ್ರಫ್ (30) ಎಂಬಾತನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಲಾಗಿದೆ. ಬೈಕಿನಲ್ಲಿ ಬಂದ ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ. ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಶ್ರಫ್ ನನ್ನು ಆಟೋ ತಡೆದು, ಮಾರಕಾಸ್ತ್ರಗಳಿಂದ ಕಡಿದು ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಪೂರ್ವ ದ್ವೇಷದಿಂದ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ