ಭದ್ರತಾ ಲೋಪ ಏರ್ ಕಮಾಂಡರ್ ರಾಜಿನಾಮೆ !

Kannada News

21-06-2017

ನವದೆಹಲಿ: ಕಳೆದ ಜನವರಿ ತಿಂಗಳಿನಲ್ಲಿ ಉಗ್ರರ ದಾಳಿಗೆ ಗುರಿಯಾಗಿದ್ದ ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಗೆ ಭದ್ರತಾ ಲೋಪವೇ ಕಾರಣ ಎಂದು ತನಿಖಾ ವರದಿಯಲ್ಲಿ ತಿಳಿದುಬಂದ ಹಿನ್ನಲೆಯಲ್ಲಿ ಏರ್ ಕಮಾಂಡರ್ ಜೆ.ಎಸ್ ಧಮೂನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಾಯುನೆಲೆ ಮೇಲಿನ ದಾಳಿಗೆ ಭದ್ರತಾ ಲೋಪವೇ ಕಾರಣ ಎಂದು ಐಎಎಫ್ ತನಿಖಾ ವರದಿಯಲ್ಲಿ ಉಲ್ಲೇಖ ಮಾಡಿತ್ತು. ದಾಳಿ ವೇಳೆ ವಾಯುನೆಲೆ ಮೇಲಿನ ನಿಯಂತ್ರಣ ಕಾರ್ಯದಲ್ಲಿದ್ದ ಏರ್ ಕಮಾಂಡ್ ಜೆ.ಎಸ್ ಧಮೂನ್ ಅವರು ವಿಫಲರಾಗಿದ್ದರು ಎಂದು ತಿಳಿಸಿತ್ತು.  ತನಿಖಾ ವರದಿಯಲ್ಲಿ ಏರ್ ಕಮಾಂಡರ್ ಮತ್ತು ಇತರರ ವೈಫಲ್ಯಗಳನ್ನು ಬಹಿರಂಗ ಪಡಿಸಲಾಗಿದೆ. ಅಲ್ಲದೆ, ವಾಯುನೆಲೆಯ ಒಳ ಮತ್ತು ಹೊರಗೆ ಗಂಭೀರ ಭದ್ರತಾ ವೈಫಲ್ಯವಿರುವುದನ್ನು ತಿಳಿಸಲಾಗಿದೆ. ಇದರಿಂದ ಏರ್ ಕಮಾಂಡರ್ ರಾಜಿನಾಮೆ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ