ಬಹಿರಂಗವಾಯ್ತು ಕುಂಬ್ಳೆ ರಾಜಿನಾಮೆಗೆ ಕಾರಣ !

Kannada News

21-06-2017

ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿರುವುದಕ್ಕೆ ಕಾರಣವನ್ನ ಅನಿಲ್ ಕುಂಬ್ಳೆ ಬಹಿರಂಗಪಡಿಸಿದ್ದಾರೆ.  ಟ್ವಿಟರ್ ನಲ್ಲಿ ತಮ್ಮ ರಾಜೀನಾಮೆಗೆ ಕಾರಣವನ್ನು ತಿಳಿಸಿರುವ ಕುಂಬ್ಳೆ, ಟೀಂ ಇಂಡಿಯಾ ಕೋಚ್ ಆಗುವ ಅವಕಾಶ ಸಿಕ್ಕಿದ್ದು, ನನಗೆ ದೊರೆತ ಗೌರವ ಎಂದು ಭಾವಿಸುತ್ತೇನೆ. ಯಾವುದೇ ತಂಡದ ಯಶಸ್ಸು, ನಾಯಕ, ಕೋಚ್, ಆಟಗಾರರು ಮತ್ತು ಸಿಬ್ಬಂದಿಗೆ ಸಲ್ಲುತ್ತದೆ ಎಂದಿದ್ದಾರೆ. ನನ್ನ ಕಾರ್ಯಶೈಲಿ ಮತ್ತು ಕೋಚ್ ಆಗಿ ಮುಂದುವರೆಯಲು ನಾಯಕನಿಗೆ ತೊಂದರೆಯಾಗಿದೆ ಎಂದು ಬಿ.ಸಿ.ಸಿ.ಐ. ನನಗೆ ಹೇಳಿತ್ತು. ಹೊಂದಾಣಿಕೆ ಪರಿಣಾಮಕಾರಿಯಾಗಿರಲು ವೃತ್ತಿಪರತೆ, ಶಿಸ್ತು, ಕೌಶಲ್ಯ ಮೊದಲಾದವು ಮುಖ್ಯವೆನಿಸುತ್ತವೆ. ಆದರೆ, ಆತ ಯಾರಿಗೂ ಜಗ್ಗಲ್ಲ. ಇಂತಹ ಸಂದರ್ಭದಲ್ಲಿ ಹೊಂದಾಣಿಕೆ ಅಸಮರ್ಥನೀಯ ಎಂದು ಕಂಡು ಬಂದಿದ್ದರಿಂದ ಹುದ್ದೆಯಲ್ಲಿ ಮುಂದುವರೆಯದಿರಲು ತೀರ್ಮಾನಿಸಿದ್ದೇನೆ. ಇಷ್ಟು ದಿನ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹಿಂದೆಯೇ ಹೇಳಲಾಗಿತ್ತಾದರೂ, ಈಗ ಮಾಹಿತಿಯನ್ನು ಕುಂಬ್ಳೆ ಬಹಿರಂಗಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ