ಮಹಿಳೆಯ ಅನುಮಾನಾಸ್ಪದ ಸಾವು !

Kannada News

21-06-2017

ಮಂಡ್ಯ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ, ಮದ್ದೂರು ಪಟ್ಟಣದ ಚನ್ನೇಗೌಡನದೊಡ್ಡಿಯಲ್ಲಿ ನಡೆದಿದೆ. ನಳಿನಾಕ್ಷಿ(೨೮) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. ನಿನ್ನೆ ಸಂಜೆ ಮಹಡಿ ಮೇಲಿಂದ ಬಿದ್ದಿದ್ದ ನಳಿನಾಕ್ಷಿ ಸಾವನ್ನಪ್ಪಿದ್ದರು. ಆದರೆ ನಳಿನಿಯವರ ಪೋಷಕರು ಅವರ ಗಂಡನ ಮನೆಯವರ ಮೇಲೆ ಕೊಲೆ ಆರೋಪ ಮಾಡುತ್ತಿದ್ದಾರೆ. ಮೃತ ನಳಿನಿಯ ಗಂಡ ಲೋಕೇಶ್, ಅತ್ತೆ ಜಯಲಕ್ಷ್ಮಿ, ನಾದಿನಿ ವಿರುದ್ದ ಆರೋಪ ಮಾಡುತ್ತಿದ್ದಾರೆ. ವರದಕ್ಷಿಣೆ, ಮಾನಸಿಕ ಕಿರುಕುಳ ಕೊಡುತ್ತಿದ್ದು, ಇವರೇ ಈ ಕೊಲೆ ನಡೆಸಿದ್ದಾರೆಂದು ಆರೋಪಿಸುತ್ತಿರುವ ನಳಿನಿಯ ಪೋಷಕರು ಮತ್ತು ಸಂಬಂಧಿಕರು ಜಿಲ್ಲಾಸ್ಪತ್ರೆ ಎದುರು ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ