ಜೈಲು ಕಿಟಕಿ ಮುರಿದು ಖೈದಿಗಳು ಪರಾರಿ !

Kannada News

21-06-2017

ಬೆಳಗಾವಿ: ಸಬ್ ಜೈಲ್ ಕಿಟಕಿ ಮುರಿದು ಇಬ್ಬರು ವಿಚಾರಣೆ ಖೈದಿಗಳು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ನಡೆದಿದೆ. ಬೆಳಗಾವಿಯ ಸಬ್ ಜೈಲಿನಲ್ಲಿ ಬೈಕ್ ಕಳ್ಳತನ ಆರೋಪದಡಿ, ವಿಚಾರಣೆ ಎದುರಿಸುತ್ತಿದ್ದ, ವಿಚಾರಣಾ ಖೈದಿ ಸುರೇಶ ಶರಣಪ್ಪ ಚಲವಾದಿ(೩೬) ಪರಾರಿಯಾಗಿದ್ದಾನೆ. ಆತನೊಂದಿಗೆ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಖೈದಿ ಸಂತೋಷ  ಶಿವಣ್ಣ ನಂದಿಹಾಳ್ (೩೬) ಮನೆ ಕಳ್ಳತನ ವಿಚಾರಣೆಗಾಗಿ ಕಳೆದ ಮೂರು ತಿಂಗಳಿಂದ ರಾಮದುರ್ಗ ಸಬ್ ಜೈಲ್ ನಲ್ಲಿದ್ದ ವಿಚಾರಣಾ ಖೈದಿಯಾಗಿದ್ದೂ ಈತನೂ ಪರಾರಿಯಾಗಿದ್ದಾನೆ. ಪೊಲೀಸರ ಕಣ್ಣುತಪ್ಪಿಸಿ ಸಬ್ ಸಬ್ ಜೈಲಿನಿದಿಂದ ಪರಾರಿಯಾದ ಖೈದಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.           ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ