ಉತ್ಸಾಹದಿಂದ ರಾಜ್ಯದೆಲ್ಲೆಡೆ ಯೋಗ ಪ್ರದರ್ಶನಗಳು !

Kannada News

21-06-2017

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ರಾಜ್ಯದ ಹಲವೆಡೆ ಯೋಗ ಪ್ರದರ್ಶನಗಳು ನಡೆಯುತ್ತಿವೆ, ರಾಜ್ಯದ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಯೋಗ ದಿನಾಚರಣೆ ಆಯೋಜಿಸಿದ್ದರು. ಈ ಯೋಗ ದಿನಾಚರಣೆಯಲ್ಲಿ ಸಂಸದ ಸಂಗಣ್ಣ ಕರಡಿ. ಜಿಲ್ಲಾ ಪಂಚಾಯತ್ ಸಿ.ಇ.ಒ ವೆಂಕಟರಾಜು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಂತರ ರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ನಡೆಯಿತು. ನೂರಾರು ಜನರು ಪಾಲ್ಗೊಂಡು ವಿವಿಧ  ಭಂಗಿಯ ಆಸನಗಳನ್ನು ಮಾಡಿ ಗಮನ ಸೆಳೆದರು‌. ಶಿರಸಿಯ ಉಪ ವಿಭಾಗಾಧಿಕಾರಿ ರಾಜಹ ಮೊಗವೀರ, ಪೌರಾಯುಕ್ತ ಮಹೇಂದ್ರಕುಮಾರ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು. ಹಾಸನದಲ್ಲೂ ವಿಶ್ವ ಯೋಗದಿನದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ಪ್ರದರ್ಶನ ನಡೆಯಿತು. ಕ್ರೀಡಾಂಗಂದಲ್ಲಿ ಸಾವಿರಾರು ಮಂದಿ ಯೋಗಾಸನದಲ್ಲಿ ಪಾಲ್ಗೊಂಡಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯೋಗ ಪಟುಗಳು,ಸಾರ್ವಜನಿಕರು ಭಾಗವಹಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ