ಮೈಸೂರಿನಲ್ಲಿ ಗಿನ್ನಿಸ್ ದಾಖಲೆಯ ಯೋಗ ಪ್ರದರ್ಶನ..?

Kannada News

21-06-2017

ಮೈಸೂರು: 3 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಿನ್ನಿಸ್ ದಾಖಲೆಯ ಯೋಗ ಪ್ರದರ್ಶನ ನಡೆಯಿತು. ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಯೋಗ ಪಟುಗಳು ಸೇರಿದ್ದಾರೆ. ದೆಹಲಿಯ ರಾಜ್ ಪಥ್ ನಲ್ಲಿ 33,900 ಸಾವಿರ ಮಂದಿ ಯೋಗ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಆ ದಾಖಲೆ ಅಳಿಸಲು ಯೋಗ ಪಟುಗಳು ಯೋಗ ಪ್ರದರ್ಶನ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಯೋಗ ಪಟುಗಳಿಂದ ಯೋಗದ ಹಲವು ಭಂಗಿಗಳ ಪ್ರದರ್ಶನ ನಡೆಸಲಾಯಿತು. ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳಾದ ಹೆಚ್.ಎಸ್.ಠಾಕೂರ್ ದೇಸಾಯಿ, ನಿವೃತ್ತ ಐ.ಎಫ್.ಎಸ್ ಅಧಿಕಾರಿ ಎ.ಸಿ.ಲಕ್ಷಣ್, ಕುಮಾರ್ ಪಾಲ್ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು, ಮತ್ತು ಹೊಸ ದಾಖಲೆಯ ಪರಿಶೀಲನೆ ನಡೆಸುತ್ತಿದ್ದರು. ಯೋಗ ಕಾರ್ಯಕ್ರಮದ ಉದ್ಘಾಟನೆಗೆ ಕೇಂದ್ರ ಸಚಿವ ಸದಾನಂದ ಗೌಡ, ಆಗಮಿಸಿದ್ದರು, ಇವರೊಂದಿಗೆ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮೈಸೂರು ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ, ಸಂಸದ ಪ್ರತಾಪ್ ಸಿಂಹ, ಹಲವು ಶಾಸಕರು  ಸೇರಿ ಗಣ್ಯರು ಭಾಗಿಯಾಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ