ಪಾಠ ಮಾಡದೇ ಶೂಟಿಂಗ್ ನೋಡಲು ಹೋದ ಶಿಕ್ಷಕರು !

Kannada News

21-06-2017

ವಿಜಯಪುರ:  ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿಬೇಕು, ಶಿಕ್ಷರನ್ನು ಅನುಸರಿಸುವ ವಿದ್ಯಾರ್ಥಿಗಳು ಅವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾರೆ. ಹೀಗಿರುವಾಗ  ಪಾಠ ಮಾಡಬೇಕಾದ ಶಿಕ್ಷರೇ ಸಿನಿಮಾ ಶೂಟಿಂಗ್ ನೋಡಲು ಹೋದರೆ ಹೇಗಿರುತ್ತದೆ, ಹೌದು ಇಂತಹ ಘಟನೆ ವಿಜಯಪುರ ಇಂಡಿ ತಾಲ್ಲೂಕಿನ ಕೊಟ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ, ಶಾಲೆಯ ಸಮಯದಲ್ಲೇ ಪಾಠ ಮಾಡದೇ ಸಿನಿಮಾ ನೋಡಲು ಶಿಕ್ಷಕರು ಹೋಗಿದ್ದಾರೆ. ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದು, ಸಿನಿಮಾ ಶೂಟಿಂಗ್ ನೋಡಲು ಹೋದ ಶಿಕ್ಷಕರ ಮೇಲೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 6 ಜನ ಶಿಕ್ಷಕರ ಪೈಕಿ 5 ಜ‌ನ ಶಿಕ್ಷಕರು ಸಿನಿಮಾ ಶೂಟಿಂಗ್ ನೋಡಲು ಹೋಗಿದ್ದು, ಐದು ಜನ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತೆಲುಗಿನ ರಾಮಾ ರಾಮಾ ರೇ , ಚಿತ್ರ ದ ಶೂಟಿಂಗ್ ವೀಕ್ಷಿಸಲು ಶಿಕ್ಷಕರು ತೆರಳಿದ್ದೂ  ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ