15 ವರ್ಷ ಜೈಲಿನಲ್ಲಿದ್ದವನಿಗೆ ಕಾದಿದ್ದ ಜವರಾಯ !

Kannada News

20-06-2017

ಉತ್ತರ ಕೊರಿಯಾ ಮತ್ತು ಅಮೆರಿಕಾ ನಡುವೆ ವಿವಾದದ ಕೇಂದ್ರ ಬಿಂದುವಾಗಿದ್ದ ಒಟ್ಟೋ ವಾರ್ಮ್ಬಿಯರ್ ಬಿಡುಗಡೆ ಆದ ಒಂದೇ ವಾರದಲ್ಲಿ ಸಾವನ್ನಪ್ಪಿದ್ದಾನೆ. ಈತನನ್ನ ಒಂದೂವರೆ ವರ್ಷಗಳ ಹಿಂದೆ ಉತ್ತರ ಕೊರಿಯಾದಲ್ಲಿ ಬಂಧಿಸಲಾಗಿತ್ತು. ಒಟ್ಟೋ ಪ್ರವಾಸಕ್ಕೆಂದು ಉತ್ತರ ಕೊರಿಯಾಗೆ ತೆರಳಿದ್ದ ಅಲ್ಲಿ ರಾಜಕಾರಣಿಯೊಬ್ಬರ ಪ್ಲೆಕ್ಸ್ ಅನ್ನ ತೆಗೆದಿದ್ದ ಎಂಬ ಆರೋಪದ ಮೇಲೆ ವಿನಾಕಾರಣ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿ ಅಧಿಕಾರಿಗಳು ಆತನಿಗೆ ವಿಪರೀತವಾಗಿ ಹಿಂಸೆ ನೀಡುತ್ತಿದ್ದರು ಇದರಿಂದ ತೀವ್ರವಾಗಿ ಘಾಸಿಗೊಂಡಿದ್ದ ಒಟ್ಟೋ ಕೋಮಾಗೆ ಜಾರಿದ್ದ. ಹೆತ್ತವರಿಗೂ ಆತನನ್ನು ಭೇಟಿಯಾಗಲು ಉತ್ತರ ಕೊರಿಯಾ ಅವಕಾಶ ನೀಡಿರಲಿಲ್ಲ. ಕಳೆದ ಮಂಗಳವಾರ ಒಟ್ಟೋ ಆರೋಗ್ಯ ಬಿಗಡಾಯಿಸಿದ್ದರಿಂದ ಉತ್ತರ ಕೊರಿಯಾ, ಜೈಲಿನಿಂದ ಬಿಡುಗಡೆ ಮಾಡಿತ್ತು. 22 ವರ್ಷದ ಒಟ್ಟೋನನ್ನು ಸಿನ್ಸಿನಾಟಿ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಗಿತ್ತು. ಒಟ್ಟೋ ಸಾವಿಗೆ ಸಂತಾಪ ಸೂಚಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ನಡೆಸಿರುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ವಿಚಾರದಲ್ಲಿ ಉತ್ತರ ಕೊರಿಯಾ ಮೇಲೆ ಸೇಡಿಗೆ ಅಮೆರಿಕಾ ಕಾಯುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ