ಅಶ್ಲೀಲ ಆ್ಯಪ್‍ ಗಳಿಂದ ಯುವಕರಿಗೆ ದೋಖಾ !

Kannada News

20-06-2017

ಬೆಂಗಳೂರು: ನಕಲಿ ಆ್ಯಪ್‍ಗಳ ಮೂಲಕ ಯುವಕರಿಗೆ ಲಕ್ಷ ಲಕ್ಷ ರೂಪಾಯಿಗಳು ಪಂಗನಾಮ ಹಾಕುತ್ತಿರುವ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಯುವ ಸಮುದಾಯಕ್ಕೆ ಕರೆವೆಣ್ಣುಗಳ ಆಸೆ ತೋರಿಸಿ ಲಕ್ಷಾಂತರ ಹಣ ಸುಲಿಗೆ ಮಾಡುವ, ನಕಲಿ ಆ್ಯಪ್‍ಗಳು ಮೊಬೈಲ್‍ ಗಳಿಗೆ ಲಗ್ಗೆಯಿಟ್ಟಿವೆ. ನಕಲಿ ಆ್ಯಪ್‍ಗಳ ಮೋಡಿಗೆ ಮಾರು ಹೋಗಿ ಯುವಕರು ಹೆಚ್ಚಾಗಿ ಅಶ್ಲೀಲ ಆ್ಯಪ್‍ಗಳಿಗೆ ದಾಸರಾಗುತ್ತಿರುವುದಲ್ಲದೇ ದುಡ್ಡು ಕೂಡ ಕಳೆದುಕೊಳ್ಳುತ್ತಿದ್ದಾರೆ. ಯುವಕರು ಹೆಚ್ಚಾಗಿ ಆ್ಯಪ್‍ ಗಳ ಬಳಕೆಯನ್ನು ಮಾಡುತ್ತಿದ್ದು, ಆ್ಯಪ್‍ಗಳನ್ನೇ ಎಲ್ಲದಕ್ಕೂ ನೆಚ್ಚಿಕೊಂಡಿರುವ ಯುವಕರು ವಂಚನಾಕಾರರ ಬಲೆಗೆ ಬಿದ್ದಿದ್ದಾರೆ. ಖದೀಮರು ಮೊಬೈಲ್ ಅಪ್ಲಿಕೇಶನ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಯುವಕರು ಈ ಅಶ್ಲೀಲ ಆ್ಯಪ್‍ಗಳ ಮೂಲಕ  ಹಾಳಾಗುವುದರ ಜೊತೆಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ನಿಯರ್ ಬೈ, ಬಿ ಗೋ ಲೈವ್, ಕ್ಲಬ್ ಫೋರ್ ಎನ್ನುವ  ಮೊಬೈಲ್ ಆ್ಯಪ್‍ಗಳು ಯುವಕರನ್ನು  ಸೆಳೆಯುತ್ತಿದ್ದು, ಹಣ ಕೊಳ್ಳೆ ಹೊಡೆಯುತ್ತಿವೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡು ಒಂದು ದಿನದ ಚಾರ್ಜ್ ಅಂತ 37 ರೂಪಾಯಿ ಪಡೆದುಕೊಳ್ಳುತ್ತಾರೆ. ಬಳಿಕ ಹುಡುಗೀರ ಫೊಟೋ ತೋರಿಸಿ ಮಂಕುಬೂದಿ ಎರಚುತ್ತಾರೆ. ಈ ಹುಡುಗೀರ ಜೊತೆ ಚಾಟ್ ಮಾಡಬೇಕಾದರೆ 100 ರೂಪಾಯಿ ಪಾವತಿಸಿ ಎನ್ನುತ್ತಾರೆ. ನೀವು ಹಣ ಕಟ್ಟುತ್ತಿದ್ದಂತೆ, ನಿಮಗೆ ಗೊತ್ತಿಲ್ಲದ ಹಾಗೆ ಓಟಿಪಿ ನಂಬರ್ ಇಲ್ಲದೆ ಹಣ ಪಾವತಿಯಾಗುತ್ತಿರುತ್ತದೆ. ಈ ಯುವತಿಯರ ಜೊತೆ ಸೆಕ್ಸ್ ಚಾಟ್ ಮಾಡಬೇಕಾದರೆ 100 ರೂಪಾಯಿ ಪಾವತಿಸಿ ಎಂದು ನಿಗದಿಪಡಿಸಲಿದ್ದು ಹಣ ಪಾವತಿಸಿದ ಕೂಡಲೇ ಗೊತ್ತಿಲ್ಲದ ಹಾಗೆ ಓಟಿಪಿ ನಂಬರ್ ಇಲ್ಲದೆ ಹಣ ಪಾವತಿಯಾಗಿರುತ್ತದೆ. ಹಣ ಪಾವತಿಯಾಗುತ್ತಿದ್ದಂತೆ ಮಾಡೆಲ್ ಗಳ ಜೊತೆ ಅಶ್ಲೀಲ ವಿಡಿಯೋ ಚಾಟ್ ಮಾಡಬೇಕಾದರೆ 800 ರೂ. ಪಾವತಿಸಿ ಎನ್ನಲಾಗುತ್ತದೆ. ಕೊನೆಗೆ ಬಿಡ್ಡಿಂಗ್ ನಡಿಯುತ್ತದೆ ಯಾರು ಹೆಚ್ಚು ಪಾವತಿ ಮಾಡುತ್ತಾರೋ ಅವರ ಜೊತೆ ಸೆಕ್ಸ್ ವಿಡಿಯೋ ಚಾಟ್ ಮಾಡುತ್ತೇವೆ ಎನ್ನುತ್ತಾ ಸುಲಿಗೆ ಮಾಡಲಾಗುತ್ತದೆ.  ಹೀಗೆ ದುಡ್ಡು ಕಸಿದುಕೊಳ್ಳಲು ಏನೇನು ಮಾಡಬೇಕಾಗುತ್ತದೆಯೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಇದೆಲ್ಲಾ ನಕಲಿಯಾಗಿದ್ದು, ಯುವಕರ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡಿರುವ ಖದೀಮರು ಹಣಗಳಿಸುವುದಕ್ಕೆ ಮಾಡಿಕೊಂಡಿರುವ ಹೊಸ ದಂಧೆ ಇದಾಗಿದೆ. ಇದರ ಬೆನ್ನತ್ತಿರುವ ನವೀನ್ ಎಂಬವರು ಎಲ್ಲಾ ದಾಖಲೆ ಮಾಹಿತಿಯೊಂದಿಗೆ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಈ ಕುರಿತು ಕ್ರಮದ ಭರವಸೆ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ