ವಾಹನ ಅಡ್ಡಗಟ್ಟುತ್ತಿದ್ದ ದರೋಡೆ ಗ್ಯಾಂಗ್ ಬಂಧನ !

Kannada News

20-06-2017

ಬೆಂಗಳೂರು: ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆಗೆ ಸಜ್ಜಾಗಿದ್ದ 6 ಮಂದಿ ದರೋಡೆ ಕೋರರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್.ಎಸ್‍.ಆರ್ ಲೇಔಟ್‍ನ ಶರವಣ (35), ಗೋವಿಂದ ರಾಜ್ (31), ಶಬರಿನಾಥ್ (24), ಕಾರ್ತಿಕ್ (23), ರಘು ಅಲಿಯಾಸ್ ಪೂಮ (23), ಸುಂದರ್ (30) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಲಾಂಗು, ಮಚ್ಚು ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಹೆಚ್.ಎಸ್.ಆರ್ ಲೇಔಟ್ ನ ವಿನಾಯಕ ನಗರದ ಗುಂಡು ತೋಪು ಬಳಿಯ ಖಾಲಿ ಜಾಗದಲ್ಲಿ ದರೋಡೆಗೆ ಸಜ್ಜಾಗಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ, ದರೋಡೆಗೆ ಸಂಚು, ಇನ್ನಿತರ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಹೆಚ್.ಎಸ್‍.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ