ಪೋಲಿ ವೆಬ್‍ಸೈಟ್ ಮೂಲಕ ವಂಚನೆ !

Kannada News

20-06-2017

ಬೆಂಗಳೂರು: ವೆಬ್‍ಸೈಟ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿರಾನಗರದ ಶಿವು,ಯೇಸುದಾಸ್ ಬಂಧಿತ ಆರೋಪಿಗಳಾಗಿದ್ದಾರೆ. ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಅಜಯ್‍ ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಅಜಯ್ ಹಿಲೋರಿ ತಿಳಿಸಿದ್ದಾರೆ. ಲೋಕಾಂಟ್ ವೆಬ್ ಮೂಲಕ ಆರೋಪಿಗಳು ಇಂದಿರಾನಗರ,ಹಲಸೂರು ಇನ್ನಿತರ ಕಡೆಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಆರೋಪಿಗಳು ಎಸ್ಕಾರ್ಟ್ ಸರ್ವೀಸ್ ನೀಡುವುದಾಗಿ ವೆಬ್‍ನಲ್ಲಿ  ಜಾಹೀರಾತು ನೀಡಿದ್ದರು. ವೆಬ್‍ಸೈಟ್ ನೋಡಿದ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿದ್ದರು.ಈ ವೇಳೆ 15 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟು 10 ಸಾವಿರ ರೂ ಪಡೆದುಕೊಂಡಿದ್ದರು. ಇಂದಿರಾನಗರದ 3ಡಿ ಮೇನ್ ಜಂಕ್ಷನ್‍ನಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಕಚೇರಿ ಇರುವುದಾಗಿ ಹೇಳಿದ್ದರು. ಇದನ್ನು ನಂಬಿ ಅಪಾರ್ಟ್‍ಮೆಂಟ್‍ಗೆ ಹೋದಾಗ ಒಳಗಡೆ ಕಚೇರಿ ಇರಲಿಲ್ಲ. ಹೊರಗೆ ಬಂದಾಗ ಹಣ ಪಡೆದ ವ್ಯಕ್ತಿಯೂ ಇರಲಿಲ್ಲ. ಇದರಿಂದ ವಂಚನೆಗೊಳಗಾದ ವ್ಯಕ್ತಿ ಇಂದಿರಾನಗರ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ