ಮೀಟರ್ ಬಡ್ಡಿ ದಂಧೆಕೋರನ ಬಂಧನ !

Kannada News

20-06-2017

ಬೆಂಗಳೂರು: ಸಾರ್ವಜನಿಕರಿಗೆ ಸಾಲ ನೀಡಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿವೇಕ್‍ ನಗರದ ಅಶೋಕ್ ಕುಮಾರ್ ಗುಪ್ತ (50) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಹೆಸರು ನಮೂದಿಸದ ಚೆಕ್‍ಗಳು, ಆರ್‍.ಸಿ ಬುಕ್‍ಗಳು, ಸ್ಮಾರ್ಟ್ ಕಾರ್ಡ್‍ಗಳು, ಖಾಲಿ ದಾಸ್ತಾವೇಜು ಪತ್ರಗಳು ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ವಿವೇಕ್‍ ನಗರದ 8ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ, ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಜೂಜಾಟ ಆಡುತ್ತಿದ್ದ 13 ಮಂದಿಯನ್ನು ಬಂಧಿಸಲಾಗಿದೆ. ಪುಟ್ಟೇನಹಳ್ಳಿ ಮುಖ್ಯರಸ್ತೆಯ ದೊರೆಬಂಗಲ ರಸ್ತೆಯ ಮನೆಯೊಂದರಲ್ಲಿ ಅಂಧರ್-ಬಾಹರ್ ಜೂಜಾಟವಾಡುತ್ತಿದ್ದ 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪುಟ್ಟೇನಹಳ್ಳಿಯ ಮೋಹನ್, ಶ್ರೀನಿವಾಸ, ಪವನ್ ಕುಮಾರ್, ರಮೇಶ್ ಬಾಬು, ವಿಜಯಕುಮಾರ್, ನವೀನ್ ಕುಮಾರ್, ಶೇಖ್ ಫಾರೂಕ್, ಶ್ರೀನಿವಾಸ, ಆಲಿಯಾಸ್ ಸೀನ, ಶ್ರೀನಿವಾಸ, ಕೃಷ್ಣೇಗೌಡ, ಹೇಮಂತ್, ಮಂಜೇಶ್, ಕಿರಣ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ 94 ಸಾವಿರ ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ