ಡೆತ್ ನೋಟ್‍ ಬರೆದು ರೈಲಿಗೆ ತಲೆಕೊಟ್ಟ ತಾಯಿ-ಮಗ !

Kannada News

20-06-2017

ಬೆಂಗಳೂರು: ದೇವನಹಳ್ಳಿಯ ಬೈಪಾಸ್ ರಸ್ತೆ ಬಳಿ ಸೋಮವಾರ ರಾತ್ರಿ ಪತಿಯ ಕುಡಿತದ ಚಟದಿಂದ ಬೇಸತ್ತಿದ್ದ ತಾಯಿ ಮಗ ಇಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದ ನಿವಾಸಿಗಳಾದ ತಾಯಿ ಸುಜಾತ(40) ಮತ್ತು ಮಗ ಸೂರ್ಯತೇಜ(18) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೈಪಾಸ್ ರಸ್ತೆ ಬಳಿ ರಾತ್ರಿ ಚಲಿಸುವ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಲಿಯೂರು ಸುಬ್ರಮಣಿಯನ್ನು 20 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಜಾತ ಅವರಿಗೆ ಸೂರ್ಯತೇಜ ಮತ್ತು ಚಂದ್ರತೇಜ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಕುಡಿತದ ಚಟ ಅಂಟಿಸಿಕೊಂಡಿದ್ದ ಸುಬ್ರಮಣಿ ದಿನನಿತ್ಯ ಕಂಠ ಪೂರ್ತಿ ಕುಡಿದು ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಕಳೆದ ವಾರ ಎರಡನೇ ಮಗ ಚಂದ್ರತೇಜ ಅಪ್ಪ ಅಮ್ಮನ ಜಗಳ ಬಿಡಿಸಲು ಹೋದ ಕಾರಣ ಅಪ್ಪ ಅವನ ಮೇಲೆ ಹಲ್ಲೆ ಮಾಡಿದ್ದ ಇದರಿಂದ ಮನನೊಂದ ಚಂದ್ರತೇಜ(15) ಕಾಳು ಕೆಡದಂತೆ ಹಾಕುವ ಮದ್ದನ್ನು ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದನು. ಮಗನ ಸಾವಿನಿಂದ ನೊಂದ ಸುಜಾತ ಚಂದ್ರತೇಜನ ಶವಸಂಸ್ಕಾರ ಮತ್ತು ಮೂರು ದಿನ ಕಾರ್ಯ ಮುಗಿಸಿ ಮೊದಲನೇಯ ಮಗ ಸೂರ್ಯತೇಜ ಜೊತೆ ರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿರುವ ಡೆತ್ ನೋಟ್‍ನಲ್ಲಿ ಆತ್ಮಹತ್ಯೆಗೆ ಸುಬ್ರಮಣಿ ಕುಡಿದು ನೀಡುತ್ತಿದ್ದ ಕಿರುಕುಳವೇ  ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ