ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ !

Kannada News

20-06-2017

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲು ಮುಂದಾಗಿದ್ದು, ಇದಕ್ಕಾಗಿ ಹೊಸ ನಿಯಮಾವಳಿಗಳನ್ನು ರೂಪಿಸುತ್ತಿದ್ದೇವೆ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂಧನ ಇಲಾಖೆ ಬೇಡಿಕೆ ಮೇಲೆ ನಡೆದ ಚರ್ಚೆ ವೇಳೆ ಉತ್ತರಿಸಿದ ಅವರು, ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಸಂಬಂಧ ವರದಿ ಸಿದ್ಧಪಡಿಸುತ್ತಿದ್ದು, ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ  ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ 16 ಗಂಟೆ ವಿದ್ಯುತ್ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ 8 ಗಂಟೆ ತ್ರೀ ಫೇಸ್ ಹಾಗೂ 8 ಗಂಟೆ ಟು ಫೇಸ್ ವಿದ್ಯುತ್ ನೀಡಲಾಗಿದೆ. ರೈತರಿಗೆಂದೇ ನೀಡುತ್ತಿರುವ ವಿದ್ಯುತ್‌ ಗೆ ಸುಮಾರು 9 ಸಾವಿರ ಕೋಟಿ ಖರ್ಚಾಗುತ್ತಿದೆ ಎಂದು ತಿಳಿಸಿದರು. 4 ಲಕ್ಷ ಅನಧಿಕೃತ ಪಂಪ್‌ಸೆಟ್ ಇದ್ದವು. ಈ ಪಂಪ್‌ ಸೆಟ್‌ಗಳನ್ನು ರೆಗ್ಯುಲರೈಸ್ ಮಾಡಲಾಗಿದೆ. ನೀರಾವರಿ ಪಂಪ್ ಸೆಟ್‌ ಗಳನ್ನು ಅಳವಡಿಸುವ ಕೆಲಸ ಮಾಡುತ್ತಿದ್ದು, ತಲಾ ಐ.ಪಿ ಸೆಟ್‌ಗೆ 50 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಈ ಕಾರ್ಯ ಹಂತ ಹಂತವಾಗಿ ಐ.ಪಿ ಸೆಟ್ ಅಳವಡಿಕೆ ಕೆಲಸ ನಡೆಯುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ವಿವರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ