ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ !

Kannada News

20-06-2017

ಚಂಡೀಘರ್: ಹರಿಯಾಣದ ಸೊಹ್ನಾದಲ್ಲಿ  ಮತ್ತೊಂದು ನಿರ್ಭಯ ಪ್ರಕರಣ ನಡೆದಿದೆ. ಮಹಿಳೆಯೋರ್ವಳನ್ನು ಅಪಹರಿಸಿದ್ದ ದುಷ್ಕರ್ಮಿಗಳು ಕಾರಿನಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಕಾರಿನಿಂದ ಹೊರಕ್ಕೆ ತಳ್ಳಿದ್ದಾರೆ. ಹರಿಯಾಣದ ಸೊಹ್ನಾ ಎಂಬ ಪ್ರದೇಶದಲ್ಲಿ ಕಳೆದ ರಾತ್ರಿ ಈ  ಘಟನೆ ನಡೆದಿದೆ. ಈ ಕೃತ್ಯ ಮಹಿಳೆಯರಿಗೆ ನೀಡುತ್ತಿರುವ ರಕ್ಷಣೆ ಎಂತಹ ಸ್ಥಿತಿಯಲ್ಲಿದೆ ಎಂಬುದನ್ನು ತೋರಿಸುತ್ತಿದೆ. 35 ವರ್ಷದ ಮಹಿಳೆಯನ್ನು ಸ್ವಿಫ್ಟ್‌‌ ಕಾರಿನಲ್ಲಿ ಅಪಹರಿಸಿದ್ದ ದುಷ್ಕರ್ಮಿಗಳು 4 ಗಂಟೆಗೂ ಹೆಚ್ಚು ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸೊಹ್ನಾದ ಬೀದಿಯಲ್ಲಿ ಸಂಚರಿಸುತ್ತಲೇ ಈ ದುಷ್ಕೃತ್ಯ ನಡೆಸಿದ್ದಾರೆ. ಬಳಿಕ ಗ್ರೇಟರ್‌ ನೋಯ್ಡಾ ಕಡೆ ತೆರಳಿದ್ದ ದುಷ್ಕರ್ಮಿಗಳು ಕಸ್ಮಾ ಎಂಬಲ್ಲಿ ಮಹಿಳೆಯನ್ನು ಕಾರಿನಿಂದ ಹೊರಗೆ ತಳ್ಳಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಮಹಿಳೆಯನ್ನು ಕಂಡ ಜನರು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದು ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸಂತ್ರಸ್ತೆಯಿಂದ ಹೇಳಿಕೆ ಪಡೆದಿರುವ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯರ ಮೇಲಿನ ಇಂತಹ ದುಷ್ಕೃತ್ಯಗಳು ಎಂತಹವರನ್ನು ಬೆಚ್ಚಿಬೀಳುವಂತೆ ಮಾಡಿದೆ, ಮಹಿಳೆಯರ ವಿರುದ್ಧ ಮೃಗಗಳಂತೆ ವರ್ತಿಸುತ್ತಿರುವವರ ವರ್ತನೆಗಳು ಬದಲಾಗಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ