ಉತ್ತರಾಖಂಡ್ ನಲ್ಲಿ ಹೈ ಅಲರ್ಟ್ !

Kannada News

20-06-2017

ಡೆಹ್ರಾಡೂನ್: ಮುಂಬರುವ 48 ಗಂಟೆಗಳಲ್ಲಿ ಉತ್ತರಾಖಂಡದಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಪ್ರಸಿದ್ಧ “ಚಾರ್ ಧಾಮ್” ಯಾತ್ರಿಕರು ಎಚ್ಚರದಿಂದ ಇರಲು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹಿಂದೂಗಳ ಪವಿತ್ರ ಕ್ಷೇತ್ರಗಳಾದ ಹರಿದ್ವಾರ ಸೇರಿದಂತೆ ಡೆಹ್ರಾಡೂನ್, ಚಮೋಲಿ, ನೈನಿತಾಲ್, ರುದ್ರಪ್ರಯಾಗ್ ಮತ್ತು ಪಿತೋರಗರ್ ಸೇರಿದಂತೆ ಉತ್ತಾರಾಖಂಡದ ಹಲವೆಡೆ ಎರಡು ದಿನಗಳವರಗೂ ಅತ್ಯಧಿಕ ಮಳೆ ಬಿಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಚಾರ್ ಧಾಮ ಯಾತ್ರಿಕರು ಮಳೆ ಅಬ್ಬರ ಕಡಿಮೆಯಾಗುವವರೆಗೂ ಎಚ್ಚರಿಕೆಯಿಂದ ಇರಲು ನಿರ್ದೇಶನ ನೀಡಿದೆ. ಈ ಭಾಗಗಲ್ಲಿ ಭೂಕುಸಿತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿದ್ದು, ರಸ್ತೆ ಮಾರ್ಗಗಳು ಸುಗಮವಾಗುವುದು ಅನುಮಾನವಾಗಿದೆ.ಈ ಕಾರಣಕ್ಕಾಗಿ ಉತ್ತರಾಖಂಡ್ ಸರ್ಕಾರ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.

.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ