ಅಕ್ರಮ ಮರಳು ಲಾರಿಗಳ ವಶ !

Kannada News

20-06-2017

ಬಳ್ಳಾರಿ:  ಅಕ್ರಮ ಮರಳು ದಂಧೆ ನಿಯಂತ್ರಣಕ್ಕೆ ಏನೆಲ್ಲ ಕ್ರಮ ಕೈಗೊಂಡರೂ ಸಹ ಯಾರ ಭಯವೂ ಇಲ್ಲದೇ, ಬಳ್ಳಾರಿಯಲ್ಲಿ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಲೇ ಇದೆ. ಆದರೆ ಜಿಲ್ಲಾಡಳಿತ ಅಕ್ರಮ ಮರಳು ಸಾಗಾಣೆ ತಪಾಸಣೆಗೆ ರಚಿಸಿರುವ ಕಾರ್ಯಪಡೆ ಇಂದು ಬೆಳಿಗ್ಗೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ನಾಲ್ಕು ಮರಳು ಲಾರಿಗಳನ್ನು ವಶಪಡಿಸಿಕೊಂಡಿದೆ. ಒಂದು ಲಾರಿಗೆ 25 ಸಾವಿರ ರೂಪಾಯಿಗಳಂತೆ ಸ್ಥಳದಲ್ಲೇ ದಂಡ ಹಾಕಲಾಗಿದೆ. ಇತ್ತೀಚೆಗಷ್ಟೆ ಮೋಕಾ ಬಳಿ ಸರಕಾರಿ ಕಾಮಗಾರಿಗಳಿಗೆ ಮರಳು ಸಾಗಾಣೆಗೆ ಸಂಗ್ರಹ ಕಾರ್ಯ ಆರಂಭಮಾಡಿದ್ದು, ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಅಕ್ರಮ ಮರಳು ದಂಧೆಕೋರರು ಅಲ್ಲಿಂದ ಮರಳನ್ನು ಅಕ್ರಮವಾಗಿ ಸಾಗಾಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಈ ವಿಚಾರ ಮರಳು ತಪಾಸಣೆ ಕಾರ್ಯಪಡೆಯ ಗಮನಕ್ಕೆ ಬಂದಿದ್ದು, ಇಂದು ಅಕ್ರಮ ಮರಳು ಲಾರಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಇದಕ್ಕೆ ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಹಕಾರವೂ ಇದೆ ಎನ್ನುವ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ