ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ರಣತಂತ್ರ !

Kannada News

20-06-2017

ನವದೆಹಲಿ: ಕೇಂದ್ರ ಸರ್ಕಾರದ ಬಿಜೆಪಿ ನೆನ್ನೆಯಷ್ಟೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮ್ ನಾಥ್ ಕೋವಿಂದ್ ಅವರನ್ನು ಘೋಷಿಸಿದೆ. ಈ ವಿಚಾರವನ್ನು ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅದಲ್ಲದೇ ರಾಮ್ ನಾಥ್ ಕೋವಿಂದ್ ಅವರು ದಲಿತರು ಎಂಬ ಕಾರಣಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದವರು ಟೀಕಿಸಿದ್ದರು, ಆದರೆ ಈ ವಿಚಾರವಾಗಿ ಕಾಂಗ್ರೆಸ್ ನವರು ಕೂಡ ಇದೇ ಹಾದಿಯನ್ನು ತುಳಿಯಲು ಮುಂದಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ, ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯಾಗಿ ಸುಶೀಲ್ ಕುಮಾರ್ ಶಿಂಧೆ ಅಥವಾ ಮೀರಾ ಕುಮಾರ್ ಅವರನ್ನು ಘೋಷಿಸುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿವೆ. ಕಾಂಗ್ರೆಸ್ ನ ಮೂಲಗಳ ಪ್ರಕಾರ ಸುಶಿಲ್ ಕುಮಾರ್ ಶಿಂಧೆ ಅವರು  ಕಾಂಗ್ರೆಸ್ ನ ಪ್ರಮುಖ ನಾಯಕನಾಗಿದ್ದು ಅವರು ದಲಿತರಾಗಿರುವ ಕಾರಣ  ಬಿಜೆಪಿ ಅಭ್ಯರ್ಥಿಗೆ ಸೆಡ್ಡು ಹೊಡೆಯಲು ಈ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈ ಕುರಿತು ಇದೇ 22 ರಂದು ಕಾಂಗ್ರೆಸ್ ಪಕ್ಷ ಸಭೆ ನಡೆಸಿ ಚರ್ಚಿಸಲಿದೆ ಎಂದು ಕೂಡ ತಿಳಿದು ಬಂದಿದೆ. ಮಾಜಿ ಕೇಂದ್ರ ಸಚಿವರಾಗಿದ್ದ ಸುಶಿಲ್ ಕುಮಾರ್ ಶಿಂಧೆ ಅವರು ಮಹಾರಾಷ್ಟ್ರದವರಾಗಿದ್ದಾರೆ, ಇದರಿಂದ ಶಿವ ಸೇನೆ ನೆರವಿಗೆ ಬರಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ. ಮತ್ತು ಲೋಕ ಸಭೆಯ ಮಾಜಿ ಸ್ಪೀಕರ್ ಆಗಿದ್ದಂತಹ ಮೀರಾಕುಮಾರ್ ಅವರಿಗೆ ಜೆಡಿಯು ಸಮ್ಮತಿ ಸೂಚಿಸುವ ಯೋಚನೆ ಮಾಡುತ್ತಿದ್ದು, ಈ ಎಲ್ಲಾ ವಿಚಾರಗಳಿಗೆ ಇನ್ನೆರಡು ದಿನಗಳಲ್ಲಿ ತೆರೆ ಬೀಳುವ ಸಾಧ್ಯತೆಗಳಿವೆ.         ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ